ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ಸುದ್ದಿಗಳು, ವಿಡಿಯೋಗಳು ನಮ್ಮನ್ನ ಮತ್ತೆ ಬಾಲ್ಯದ ದಿನಗಳತ್ತ ಕರೆದುಕೊಂಡು ಹೋಗಿ ಬಿಡುತ್ತೆ. ಈಗ ಮತ್ತೆ ಅಂತಹದ್ದೇ ಒಂದು ಸುದ್ದಿ 90ರ ದಶಕದ ವಿದ್ಯಾರ್ಥಿಗಳು ತಮ್ಮ ಹಳೆಯ ದಿನಗಳನ್ನ ನೆನಪು ಮಾಡಿಕೊಳ್ಳುವ ಹಾಗಾಗಿದೆ. ಅಷ್ಟಕ್ಕೂ ಈಗ ಹಳೆಯ ನೆನಪುಗಳು ಮತ್ತೆ ಕಣ್ಮುಂದೆ ಬರುವಂತೆ ಮಾಡಿದ್ದು ಯಾರು ಗೊತ್ತಾ..? ʼಆ್ಯಡ್ ಜೆಲ್ ಪೆನ್ʼ (ADD GEL PEN)
ನೀವೇನಾದ್ರೂ 90ರ ದಶಕದ ವಿದ್ಯಾರ್ಥಿಗಳಾಗಿದ್ದರೆ ನಿಮಗೆ ಡಾನ್ಸ್ ಶೋ ಬೂಗಿ-ವೂಗಿ, ಶಕ್ತಿಮಾನ್ ಎಷ್ಟು ಗೊತ್ತೋ, ಅಷ್ಟೇ ಈ “ಆ್ಯಡ್ ಜೆಲ್ ಪೆನ್“ ಬಗ್ಗೆಯೂ ಚೆನ್ನಾಗಿ ಗೊತ್ತಿರುತ್ತೆ. ಇಂಕ್ ಪೆನ್ ಸ್ವಲ್ಪ ಅಪ್ಡೇಟೆಡ್ ಆಗಿ ಬಂದದ್ದೇ, ಜೆಲ್ ಪೆನ್. ಈ ಪೆನ್ನಿನ ಬೆಲೆ ಆಗ ಅಬ್ಬಬ್ಬಾ ಅಂದ್ರೆ 10-20 ರೂಪಾಯಿ ಆಗಿತ್ತು.
ಈಗ ಪೆನ್ನಿನ ಬೆಲೆ ಏರಿಕೆಯಾಗಿದ್ದು, ಅನೇಕರಿಗೆ ನಿರಾಶೆಯಾಗಿದೆ. ಕೆಲವರು ಇದನ್ನು ನಂಬೋಕೆನೇ ಸಾಧ್ಯ ಇಲ್ಲ ಅಂತ ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಹೇಳಿಕೊಂಡಿದ್ಧಾರೆ.
ಉದ್ಯೋಗದ ನಿರೀಕ್ಷೆಯಲ್ಲಿರುವ ಶಿವಮೊಗ್ಗ ಜಿಲ್ಲೆ ಜನತೆಗೆ ಇಲ್ಲಿದೆ ಮುಖ್ಯ ಮಾಹಿತಿ
ಇನ್ನೊಬ್ಬರು “ಆ ಕಾಲದಲ್ಲಿ ಇದು ತುಂಬಾ ಕಾಸ್ಟ್ಲಿಯಸ್ಟ್ ಪೆನ್ನಾಗಿತ್ತು. ಇದನ್ನ ಕೊಂಡುಕೊಳ್ಳುವುದು ನನಗೆ ಕಷ್ಟವಾಗಿತ್ತು. ಈಗ ಈ ಪೆನ್ನು ಇನ್ನೂ ದುಬಾರಿಯಾಗಿದೆ” ಅಂತ ಬರೆದಿದ್ದಾರೆ.
“ಆಗ ಮ್ಯಾಂಟೆಕ್ಸ್, ರೆನಾಲ್ಡ್ಸ್ ಪೆನ್ನುಗಳ ಭರಾಟೆ ಇತ್ತು. ಅದರ ನಡುವೆ ಈ ಪೆನ್ನು ಪೈಪೋಟಿ ನೀಡಿತ್ತು. ಈಗ ಈ ಪೆನ್ನಿನ ಬೆಲೆ 40 ಅಂದ್ರೆ ಅದು ತುಂಬಾ ದುಬಾರಿಯಾಗಿದೆ ಅಂದ್ರೆ ನಂಬೋಕೆ ಕಷ್ಟ..!”
ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯ ಭಾವನೆಯನ್ನ ಈ ಪೆನ್ನಿನ ಜೊತೆ ಹಂಚಿಕೊಂಡಿದ್ಧಾರೆ. ಈ ಪೆನ್ನಿನ ಬೆಲೆ ಏರಿಕೆಯಾಗಿದ್ದರಿಂದಲೇ, ಎಲ್ಲರೂ ಮತ್ತೆ ತಮ್ಮ ಹಳೆಯ ನೆನಪುಗಳನ್ನ ಮೆಲಕು ಹಾಕುವಂತಾಗಿದೆ.