alex Certify ಹೋಟೆಲ್‌ ಗೆ ಬರುವವರು ʼಆಂಟಿʼ ಎಂದು ಕರೆಯುವಂತಿಲ್ಲ; ಬೋರ್ಡ್‌ ಹಾಕಿ ತಾಕೀತು ಮಾಡಿದ ಮಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೋಟೆಲ್‌ ಗೆ ಬರುವವರು ʼಆಂಟಿʼ ಎಂದು ಕರೆಯುವಂತಿಲ್ಲ; ಬೋರ್ಡ್‌ ಹಾಕಿ ತಾಕೀತು ಮಾಡಿದ ಮಾಲಕಿ

ಅಂಕಲ್….. ಆಂಟಿ…… ಇವೆರಡು ಪದಗಳು ಕಾಮನ್ ಪದಗಳಾಗಿ ಹೋಗ್ಬಿಟ್ಟಿದೆ. ಅಪರಿಚಿತರನ್ನ ಮಾತಾಡಿಸಲೇ ಬೇಕಾದ ಸಂದರ್ಭ ಬಂದಾಗ, ಥಟ್ ಅಂತ ಪದ ಬಾಯಿಗೆ ಬರೋದೇ ಇದು. ಕೇವಲ ಬೆಂಗಳೂರು ಮಾತ್ರ ಅಲ್ಲ ಇಡೀ ವಿಶ್ವದಾದ್ಯಂತ ಈ ಅಂಕಲ್, ಆಂಟಿ ಪದಗಳು ತುಂಬಾ ಫೇಮಸ್. ಅದರಲ್ಲೂ ಆಂಟಿ ಅನ್ನೋದು ಕೆಲವೊಮ್ಮೆ ವ್ಯಂಗ್ಯವಾಗಿಯೂ ಹೇಳುವುದು ಉಂಟು.

ನಿಮಗೆಲ್ಲ ಗೊತ್ತಿರಲಿ ಆಂಟಿ ಅಂತ ಕರೆಯೋದು ವಯಸ್ಸಿನ ಆಧಾರದ ಮೇಲೆ ಅಲ್ಲವೇ ಅಲ್ಲ. ವಯಸ್ಸಲ್ಲಿ ಚಿಕ್ಕವರಾಗಿದ್ದರೂ ಅಷ್ಟೆ. ಆಂಟಿ ಅಂತಾನೇ ಕರೆಯುತ್ತಾರೆ. ಇದು ಕೆಲವೊಮ್ಮೆ ತುಂಬಾ ಮುಜುಗರ ಪಡಿಸುತ್ತೆ. ಅದಕ್ಕಂತಾನೇ ತೈವಾನಿನ ಹೋಟೆಲ್ ಮಾಲೀಕಳೊಬ್ಬಳು ಹೊಸ ಐಡಿಯಾ ಕಂಡು ಹಿಡಿದಿದ್ದಾಳೆ. ಅದಕ್ಕಂತಾನೇ ಆಕೆ ತನ್ನ ಹೋಟೆಲ್ ಹೊರಗೆ ಒಂದು ಬೋರ್ಡ್​ನ್ನ ಹಾಕಿದ್ದಾರೆ. ಆ ಬೋರ್ಡ್ ಈಗ ವೈರಲ್ ಆಗ್ತಿದೆ.

ತೈವಾನ್​ನ ತಾಯ್ಪೆ ಪ್ರಾಂತ್ಯದ ತಾಓಯುವಾನ್ ಅನ್ನೋ ಊರಿನಲ್ಲಿ ಇರುವ ಹೋಟೆಲ್ ಮುಂದೆ ಹಾಕಿದ್ದ ಬೋರ್ಡ್ ಎಲ್ಲರನ್ನ ಆಕರ್ಷಿಸಿತ್ತು. ಅದನ್ನ ಬಾಓಫಿ ಕಮ್ಯೂನ್ ಅನ್ನು ವ್ಯಕ್ತಿ ತನ್ನ ಫೇಸ್​​ಬುಕ್​ನಲ್ಲಿ ಹಾಕಿಕೊಂಡಿದ್ದಾರೆ.

“ನೀವು ಆರ್ಡರ್ ಮಾಡುವ ಆಹಾರದ ಗುಣಮಟ್ಟ ಉತ್ತಮವಾಗಿರಬೇಕೆಂದರೆ, 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ದಯಮಾಡಿ ಆಂಟಿ ಅಂತ ಕರೆಯಬೇಡಿ” ಅಂತ ಆ ಬೋರ್ಡ್ನಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲ ಅದೇ ಬೋರ್ಡ್​ಲ್ಲಿ ಈ ಅಂಗಡಿಯ ಮಾಲೀಕಳ ಫೋಟೋ ಕೂಡಾ ಹಾಕಲಾಗಿದೆ.

ಫೇಸ್​​ಬುಕ್​ಲ್ಲಿ ಬೋರ್ಡ್ ಅಪ್ಲೋಡ್ ಮಾಡಿರುವ ವ್ಯಕ್ತಿ ತನಗಾಗಿರುವ ಅನುಭವನ್ನ ಕೂಡಾ ಫೇಸ್​​ಬುಕ್​ನಲ್ಲಿ ಬರೆದುಕೊಂಡಿದ್ದಾರೆ. “ಆ ಹೋಟೆಲ್​ಗೆ ಹೋದ ನಾನು ಆಂಟಿ ನನಗೆ ಹುರಿದ ಈರುಳ್ಳಿ ಜೊತೆಗೆ ಬಿಸಿಬಿಸಿ ಚಿಕನ್​​ನ ಒಂದು ದೊಡ್ಡ ತುಂಡು ಜೊತೆಗೆ ಒಂದು ಲೋಟ ತಣ್ಣನೆಯ ಹಾಲನ್ನ ಕೂಡಾ ಕೊಡಿ” ಅಂತ ಹೇಳಿದ್ದೆ. ತಕ್ಷಣವೇ ನನ್ನ ಪಕ್ಕದಲ್ಲಿ ಇದ್ದ ವ್ಯಕ್ತಿ, ಆ ಬೋರ್ಡ್​ನತ್ತ ಇಶಾರೆ ಮಾಡಿ ತೋರಿಸುತ್ತಾನೆ. ಆಗ ನನಗೆ ಗೊತ್ತಾಯ್ತು ನಾನು ಎಂಥಾ ದೊಡ್ಡ ತಪ್ಪು ಮಾಡಿದ್ದೆ ಅಂತ. ತಕ್ಷಣವೇ ನಾನು ಮಾಡಿದ್ದ ತಪ್ಪನ್ನ ತಿದ್ದಿಕೊಂಡಿದ್ದೆ. ಆದರೂ ಆಕೆ ನನಗೆ ರುಚಿಯಾದ ಊಟವನ್ನೇ ಕೊಟ್ಟಿದ್ದಳು. ಕೆಲವೊಮ್ಮೆ ನಾವು, ಸಮಯ ಸಂದರ್ಭ ನೋಡಿ ಮಾತನಾಡಬೇಕು. ಬೇರೆಯವರನ್ನ ನೋಯಿಸುವ ಉದ್ದೇಶ ಇಲ್ಲದಿದ್ದರೂ, ಅದು ಅವರಿಗೆ ನೋವುಂಟು ಮಾಡಬಹುದು ಅನ್ನೋದನ್ನ ಮರೆಯಕೂಡದು ಎಂದಿದ್ದಾನೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...