ಬೆಂಗಳೂರು: 1ರಿಂದ 10ನೇ ತರಗತಿಯ ಪಠ್ಯ ಪುಸ್ತಕ ಹಾಗೂ 6ರಿಂದ 10ನೇ ತರಗತಿಯ ಪಠ್ಯ ಪುಸ್ತಕ ಪರಿಷ್ಕರಿಸಿ 2022-23ನೇ ಸಾಲಿಗೆ ಅಳವಡಿಸಿ ಮಾಹಿತಿ ಕುರಿತು ಸರ್ಕಾರ ತಿದ್ದೋಲೆ ಹೊರಡಿಸಿದೆ.
1ರಿಂದ 10ನೇ ತರಗತಿಯ ಪಠ್ಯ ಪುಸ್ತಕ ಹಾಗೂ 6ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ವಿಷಯಗಳ ಪರಿಷ್ಕೃತ ಪಠ್ಯ ಪುಸ್ತಕಗಳನ್ನು ಮಾರ್ಪಡಿಸಿ ಶಿಕ್ಷಣ ಇಲಾಖೆ ತಿದ್ದೋಲೆ ಹೊರಡಿಸಿದೆ. ಪಠ್ಯದಲ್ಲಿ ಯಾವುದೇ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ವಿಷಯಗಳ ಕುರಿತು ಶಿಕ್ಷಕರು ಹಾಗೂ ತಜ್ಞರನ್ನೊಳಗೊಂಡ ಸಮಿತಿಯೊಂದನ್ನು ರಚಿಸಿ 15 ದಿನಗಳ ಒಳಗೆ ವರದಿ ಪಡೆದು ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ. ನಂತರ ಈ ವರದಿ ಪರಾಮರ್ಷಿಸಲು ಉನ್ನತ ಮಟ್ಟದ ತಜ್ಞರ ಸಮಿತಿಗೆ ಸದಸ್ಯರನ್ನು ಹೆಸರಿಸಲಾಗುವುದು.
6ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರಲ್ಲಿನ ಪಾಠ-7 ಹೊಸಧರ್ಮಗಳು ಏಕೆ ಉದಯಿಸಿದವು ಈ ಪಾಠದಲ್ಲಿನ 82 ಮತ್ತು 83 ರಲ್ಲಿನ ವಿಷಯಾವಂಶಗಳನ್ನು ಮೌಲ್ಯಮಾಪನದಲ್ಲಿ ಪರಿಗಣಿಸದಿರುವಂತೆ ಶಿಕ್ಷಣಾಧಿಕಾರಿಗಳು, ಮುಖ್ಯಶಿಕ್ಷಕರಿಗೆ ಶಿಕ್ಷಣ ಸಚಿವರ ಸೂಚನೆಯಂತೆ ಸುತ್ತೋಲೆ ಪ್ರಕಟಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೇ ಪಠ್ಯ ಪರಿಷ್ಕರಣೆ ವೇಳೆ ತಿದ್ದುಪಡಿ ಮಾಡಿರುವ ಅಂಶಗಳ ಬಗ್ಗೆ ಸುತ್ತೋಲೆಯಲ್ಲಿ ವಿವರಿಸಿದೆ.