ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಮಾತಿದೆ. ಹೀಗಾಗಿ ಯಾರಾದರೂ ಹಾವನ್ನು ಹೊಡೆದರೆ ಸರ್ಪ ಶಾಂತಿ ಮಾಡಿಸುತ್ತಾರೆ. ಆದರೆ ಇಲ್ಲೊಂದು ಕೋಣದ ದ್ವೇಷ ಕಂಡು ಗ್ರಾಮಸ್ಥರು ಕಂಗಾಲಾಗಿ ಹೋಗಿದ್ದಾರೆ.
ಹೌದು, ಇಂಥದೊಂದು ಘಟನೆ ಕೊಪ್ಪಳ ತಾಲೂಕಿನ ಹಳೆಬಂಡಿ ಹರ್ಲಾಪುರ ಗ್ರಾಮದಲ್ಲಿ ನಡೆದಿದ್ದು, ಇಲ್ಲಿನ ಗ್ರಾಮದೇವತೆ ಕಂಟೆಮ್ಮ ದುರ್ಗಾದೇವಿಗೆ ಕೋಣವೊಂದನ್ನು ಬಿಡಲಾಗಿದೆ.
ಗ್ರಾಮದೇವತೆಗೆ ಬಿಟ್ಟಿರುವ ಈ ಕೋಣ ತನ್ನನ್ನು ಯಾರಾದರೂ ಹೊಡೆದರೆ ಹಾಗೂ ಗದರಿಸಿದರೆ ಅವರನ್ನು ಎಲ್ಲೇ ಕಂಡರು ಬೆನ್ನಟ್ಟಿಕೊಂಡು ಹೋಗುತ್ತಂತೆ. ಅಲ್ಲದೆ ಅಂಥವರ ಮನೆ ಮುಂದೆ ಕಾದು ನಿಲ್ಲುತ್ತಿದ್ದು, ಇದರಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಹೀಗಾಗಿ ಈ ಕೋಣ ಗದ್ದೆಗೆ ನುಗ್ಗಿ ಬೆಳೆ ಹಾನಿ ಮಾಡಿದರೂ ಸಹ ಅದನ್ನು ಓಡಿಸಲು ಗ್ರಾಮಸ್ಥರು ಹೆದರುತ್ತಿದ್ದಾರೆ. ಈಗಾಗಲೇ ಇದಕ್ಕೆ ಹೊಡೆದ ಗ್ರಾಮದ ಮೂವರು ಅದರ ದ್ವೇಷಕ್ಕೆ ಹೈರಾಣಾಗಿ ಹೋಗಿದ್ದಾರೆ.