ನಿಮಗಿಷ್ಟವಾದ ರುಚಿಕರ ತಿನಿಸನ್ನು ಮೊಬೈಲ್ ನಲ್ಲೋ, ಟಿವಿಯಲ್ಲೋ ನೋಡಿದಾಗ ಬಾಯಲ್ಲಿ ನೀರೂರೋದು ಖಚಿತ. ಹಾಗೆಯೇ ನಾಯಿಯೊಂದು ಮಾಂಸದ ಭಕ್ಷ್ಯವನ್ನು ನೋಡುತ್ತಾ ಟಿವಿಯನ್ನು ನೆಕ್ಕುತ್ತಿರುವ ಉಲ್ಲಾಸದ ವಿಡಿಯೋ ವೈರಲ್ ಆಗುತ್ತಿದೆ.
ಮೈ ಚೈನಾ ಟ್ರಿಪ್ ಎಂಬ ಬಳಕೆದಾರರಿಂದ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದು 9.1 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಹಲವಾರು ಲೈಕ್‌ಗಳನ್ನು ಪಡೆದುಕೊಂಡಿದೆ. ಸಾಕುಪ್ರಾಣಿ ಹಸ್ಕಿ ಟಿವಿ ಪರದೆಯನ್ನು ನೆಕ್ಕುವುದನ್ನು ವಿಡಿಯೋದಲ್ಲಿ ನೋಡಬಹುದು. ರಸಭರಿತವಾದ ಕೆಂಪು ಮಾಂಸದ ತುಂಡುಗಳನ್ನು ಟಿವಿಯಲ್ಲಿ ಕಂಡ ಶ್ವಾನವು ಒಂದೇ ಸಮನೆ ನೆಕ್ಕಲು ಶುರು ಮಾಡಿದೆ.
ಇನ್ನೊಂದು ಸಾಕು ನಾಯಿ ಗೋಲ್ಡನ್ ರಿಟ್ರೀವರ್, ಟಿವಿ ಪಕ್ಕದ ಗೋಡೆಗೆ ತನ್ನ ತಲೆಯನ್ನು ಇಟ್ಟುಕೊಂಡು ಬಹಳ ಬೇಸರದಿಂದ ಇರುವಂತೆ ಸುಮ್ಮನೆ ಕುಳಿತಿದೆ. ಇದು ನೋಡಲು ಬಹಳ ತಮಾಷೆಯಾಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ.