ಬಾಲಿವುಡ್ ನಟ ರಣಬೀರ್ ಕಪೂರ್, ಸ್ಟೈಲ್, ಸ್ಮೈಲ್, ಲುಕ್‌ಗೆ ಫಿದಾ ಆಗದವರೇ ಯಾರೂ ಇಲ್ಲ. ನ್ಯಾಶನಲ್ ಕ್ರಶ್ ಆಗಿರೋ ರಣಬೀರ್ ಕಪೂರ್, ನಟಿ ಆಲಿಯಾ ಭಟ್ ಜೊತೆ ಮದುವೆ ಆದಾಗ ಅದೆಷ್ಟೊ ಹುಡುಗಿಯರ ಹೃದಯವೇ ಒಡೆದು ಹೋಗಿತ್ತು. ಸದ್ಯಕ್ಕೆ ಬಾಲಿವುಡ್‌ನ ಹಾಟ್ ಎಂಡ್ ಕ್ಯೂಟ್ ಕಪಲ್ ಅಂದ್ರೆ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್.
ರಣಬೀರ್ ಮತ್ತು ಆಲಿಯಾ ಇನ್ನೂ ಹನಿಮೂನ್ ಮೂಡ್‌ನಲ್ಲಿ ಇದ್ದಾರೆ. ಆದರೂ ಇವರಿಬ್ಬರೂ ತಮ್ಮ ಪ್ರಾಜೆಕ್ಟ್‌ಗಳ ಬಗ್ಗೆ ನಿರ್ಲಕ್ಷ್ಯವಹಿಸುತ್ತಿಲ್ಲ. ಬದಲಾಗಿ ಇನ್ನಷ್ಟು ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈಗ ರಣಬೀರ್ ಕಪೂರ್ ತಮ್ಮ ಬಹುನಿರೀಕ್ಷಿತ ‘ಶಂಶೇರಾ‘ ಚಿತ್ರ ಪ್ರಮೋಶನ್ ನಲ್ಲಿ ಬ್ಯುಸಿ. ಹಾಗಾಗಿ ಅನೇಕ ಕಾರ್ಯಕ್ರಮಗಳಲ್ಲಿ, ಇಂಟರ್‌ವ್ಯೂಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಣಬೀರ್ ಇತ್ತೀಚೆಗೆ ಖಾಸಗಿ ಇಂಟರವ್ಯೂನಲ್ಲಿ ಹೇಳಿದ ಒಂದು ಮಾತು ಎಲ್ಲರೂ ಶಾಕ್ ಆಗುವ ಹಾಗಿತ್ತು. ಅಷ್ಟಕ್ಕೂ ಅವರು ಹೇಳಿದ್ದು ಏನು ಗೊತ್ತಾ ? ಆಲಿಯಾ ನನ್ನ ಮೊದಲ ಹೆಂಡತಿ ಅಲ್ಲ. ನಾನು ನನ್ನ ಮೊದಲ ಹೆಂಡತಿಯನ್ನ ಭೇಟಿಯಾಗಲು ಕಾಯ್ತಾ ಇದ್ದೇನೆ ಅಂತ ಹೇಳಿ ಎಲ್ಲರನ್ನೂ ಕನ್ಫ್ಯೂಸ್ ಮಾಡಿದ್ದಾರೆ.
ಯಾರು ಈ ರಣಬೀರ್ ಕಪೂರ್ ಮೊದಲ ಹೆಂಡತಿ, ಆಕೆ ಎಲ್ಲಿದ್ದಾಳೆ ಅನ್ನೋ ಹತ್ತು ಹಲವಾರು ಪ್ರಶ್ನೆಗಳು ಈಗ ಎದ್ದಿವೆ. ಜನರ ಈ ಉತ್ಸುಕತೆಯನ್ನ ನೋಡಿ, ಕೊನೆಗೆ ರಣಬೀರ್ ಎಲ್ಲರ ಕನ್ಫ್ಯೂಜನ್ ದೂರ ಮಾಡಿದ್ದಾರೆ. “ಮುಂಬೈನಲ್ಲಿ ಇದ್ದಾಗ ಯಾರೋ ಒಬ್ಬರು ಮಹಿಳಾ ಅಭಿಮಾನಿ. ನನ್ನ ಮನೆಯ ಗೇಟ್‌ಗೆನೇ ಹೂವು, ಹಾರ ಹಾಕಿ ಮದುವೆಯಾಗಿದ್ದಾರೆ. ಇದು ನನ್ನ ಸೆಕ್ಯೂರಿಟಿ ಹೇಳಿದ್ಮೇಲೆಯೇ ಗೊತ್ತಾಗಿದ್ದು. ಆಕೆ ಯಾರು ? ಏನು ? ಅನ್ನೋದು ನನಗೆ ಇನ್ನೂ ಗೊತ್ತಾಗಿಲ್ಲ. ನನ್ನ ಗೇಟ್‌ಗೆ ಮದುವೆಯಾಗಿ ನನ್ನನ್ನೇ ಗಂಡ ಅಂತ ಆಕೆ ಹೇಳಿದ್ದಾಳಂತೆ. ನಾನು ಗಂಡ ಅಂದ್ಮೇಲೆ ಆಕೆ ಹೆಂಡತಿ ತಾನೇ ? ನಾನು ಆಕೆಯನ್ನ ನೋಡಲು ಕಾತುರನಾಗಿದ್ದೇನೆ ಎಂದು ರಣಬೀರ್ ಹಾಸ್ಯಾತ್ಮಕವಾಗಿ ಹೇಳಿದ್ದಾರೆ.
ರಣಬೀರ್ ಅಭಿನಯದ ಶಂಶೇರಾ ಟ್ರೇಲರ್ ಬಿಡುಗಡೆಯಾದ ಕೆಲವೇ ಕೆಲವು ನಿಮಿಷಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅಭಿಮಾನಿಗಳು ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮುಂದಿನ ತಿಂಗಳು ಜುಲೈ 22ರಂದು ಬಿಡುಗಡೆಯಾಗಲಿರೋ ಈ ಚಿತ್ರದಲ್ಲಿ ಸಂಜಯ್ ದತ್ ಮತ್ತು ವಾಣಿ ಕಪೂರ್, ರಣಬೀರ್ ಜೊತೆಗೆ ತೆರೆಯನ್ನ ಹಂಚಿಕೊಳ್ಳುತ್ತಿದ್ದಾರೆ.