alex Certify ದಾರಿಯಲ್ಲಿ ಸಿಕ್ಕ ʼಹಣʼ ಜೇಬಿಗೆ ಹಾಕಿಕೊಳ್ಳುವ ಮುನ್ನ ಇದನ್ನು ತಿಳಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿಯಲ್ಲಿ ಸಿಕ್ಕ ʼಹಣʼ ಜೇಬಿಗೆ ಹಾಕಿಕೊಳ್ಳುವ ಮುನ್ನ ಇದನ್ನು ತಿಳಿಯಿರಿ

 

ಅನೇಕರಿಗೆ ದಾರಿಯಲ್ಲಿ ಹಣ ಸಿಕ್ಕಿರುತ್ತೆ. ಇದು ಶುಭ ಸೂಚನೆಯಾ ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇರುತ್ತದೆ.  ಶಾಸ್ತ್ರದ ಪ್ರಕಾರ, ಈ ರೀತಿ ರಸ್ತೆಯಲ್ಲಿ ಬಿದ್ದಿರುವ ಹಣ ಶುಭವೆಂದು ಪರಿಗಣಿಸಲಾಗಿದೆ. ಇದರರ್ಥ ನಿಮ್ಮ ಜೀವನದಲ್ಲಿ ಹೊಸ ಅಥವಾ ಒಳ್ಳೆಯದು ಶೀಘ್ರದಲ್ಲೇ ಸಂಭವಿಸಲಿದೆ ಎಂದರ್ಥ.

ಹೊಸ ಕೆಲಸಕ್ಕೆ ಹೊರಟ ಸಮಯದಲ್ಲಿ ನಾಣ್ಯ ದಾರಿಯಲ್ಲಿ ಸಿಕ್ರೆ  ಅದು ಶುಭಕರ. ಇದರರ್ಥ ನಿಮ್ಮ ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ ಎಂಬ ಸೂಚನೆ.

ದಾರಿಯಲ್ಲಿ ಹಣ ಸಿಗೋದು, ನಿಮ್ಮ ಜೀವನದಲ್ಲಿ ಯಶಸ್ಸು, ಪ್ರಗತಿ ಮತ್ತು ಹೊಸ ಸಾಧನೆಯತ್ತ ಸಾಗುತ್ತಿರುವುದನ್ನು ಸಹ ಸೂಚಿಸುತ್ತದೆ.

ಫೆಂಗ್ ಶೂಯಿ ಪ್ರಕಾರ, ಹಣವನ್ನು ಕೇವಲ ವ್ಯವಹಾರ ದೃಷ್ಟಿಯಿಂದಷ್ಟೇ ಅಲ್ಲದೆ ಇದನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ದಾರಿಯಲ್ಲಿ ಹಣ ಸಿಕ್ರೆ ಅವ್ರನ್ನು ಅದೃಷ್ಟಶಾಲಿ ಎನ್ನಬಹುದು

ವ್ಯಕ್ತಿಯೊಬ್ಬನಿಗೆ ದಾರಿಯಲ್ಲಿ 1 ರೂಪಾಯಿ ಸಿಕ್ಕಿದ್ರೆ, ನಂತರ  ಹೆಚ್ಚೆಚ್ಚು ಹಣ ಸಿಗುತ್ತದೆ ಎಂಬ ನಂಬಿಕೆಯೂ ಇದೆ. ಧರ್ಮಗ್ರಂಥಗಳ ಪ್ರಕಾರ, ಹಣದ ಮೌಲ್ಯಕ್ಕೆ ಅನುಗುಣವಾಗಿ ಅವುಗಳ ಪರಿಣಾಮವೂ ಬದಲಾಗುತ್ತದೆ.

ರಸ್ತೆಯಲ್ಲಿ ಸಿಕ್ಕ ನಾಣ್ಯವವನ್ನು ಮನೆಯಲ್ಲಿ  ಗಾಜಿನ ಬಾಟಲಿಯಲ್ಲಿ ನೀರು ತುಂಬಿಸಿ ಅದರಲ್ಲಿ ಹಾಕಿ. ಸ್ವಚ್ಛವಾಗಿ ತೊಳೆದ ನಂತ್ರ ನಾಣ್ಯವನ್ನು ಮನೆಯ ದೇವಾಲಯದಲ್ಲಿ ಇರಿಸಿ.

ರಸ್ತೆಯಲ್ಲಿ ಸಿಕ್ಕ ಹಣದಿಂದ ಏನು ಮಾಡಬೇಕು ಎಂಬ ಪ್ರಶ್ನೆ ಕೆಲವರನ್ನು ಕಾಡುತ್ತದೆ. ಹಣ ಸಿಕ್ಕ ಸಮಯ ಮತ್ತು ಸ್ಥಳಕ್ಕೆ ಅನುಗುಣವಾಗಿ ಅದನ್ನು ಬಳಸಬೇಕು.

ಕಚೇರಿಗೆ ಹೋಗುವಾಗ ನಿಮಗೆ ಹಣ ಸಿಕ್ಕರೆ  ಅದನ್ನ ನಿಮ್ಮ ಕೆಲಸದ ಸ್ಥಳದಲ್ಲಿ ಇಡಿ. ಹೀಗೆ ಮಾಡಿದ್ರೆ ಕೆಲಸದಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ಹಾಗೆಯೇ ಈ ಹಣವನ್ನು ಎಂದೂ ಮನೆಯ ಕಪಾಟಿನಲ್ಲಿ ಇಡಬಾರದು.

ನಿಮ್ಮ ಪರ್ಸ್‌ನಲ್ಲಿ ಇಡಬಹುದು. ಆದರೆ ನೀವು ಆ ಹಣವನ್ನು ಖರ್ಚು ಮಾಡಲೇಬೇಕು ಅಥವಾ ಯಾರಿಗೂ ದಾನ ಮಾಡಲೇಬೇಕೆಂದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...