ಶಿವಮೊಗ್ಗ: ಹೊನ್ನಾಳಿ ರಸ್ತೆಯಲ್ಲಿ ವ್ಯಾನ್ ಹಾಗೂ ಕಾರ್ ನಡುವೆ ಡಿಕ್ಕಿಯಾಗಿ ಗರ್ಭಿಣಿ ಪತ್ನಿ ಹಾಗೂ ಪತಿ ಸಾವನ್ನಪ್ಪಿದ್ದಾರೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಮಲ್ಲಹಾಳ್ ಗ್ರಾಮದ ಧನಂಜಯ(32), ಅವರ ಪತ್ನಿ ರೋಜಾ(24) ಮೃತಪಟ್ಟವರು ಎಂದು ಹೇಳಲಾಗಿದೆ. ಒಂದೂವರೆ ವರ್ಷದ ಹಿಂದೆ ಧನಂಜಯ ಮತ್ತು ರೋಜಾ ಮದುವೆಯಾಗಿದ್ದರು.
ಗರ್ಭಿಣಿಯಾಗಿದ್ದ ರೋಜಾ ಅವರನ್ನು ಆಸ್ಪತ್ರೆಗೆ ತೋರಿಸಲು ಶಿವಮೊಗ್ಗಕ್ಕೆ ಹೋಗಿ ವಾಪಸ್ ಬರುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದು, ಧನಂಜಯ ಮತ್ತು ತುಂಬು ಗರ್ಭಿಣಿ ರೋಜಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಧನಂಜಯ ಅವರ ತಾಯಿ, ಅತ್ತಿಗೆ ಹಾಗೂ ಸ್ನೇಹಿತ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.