ಬಾಲಿವುಡ್ ಜೋಡಿಗಳಲ್ಲಿ ರಿಷಿ ಕಪೂರ್ – ನೀತು ಕಪೂರ್ ದಂಪತಿಯದು ದೊಡ್ಡ ಹೆಸರು. ಇತ್ತೀಚೆಗೆ ರಿಷಿ ಕಪೂರ್ ವಿಧಿವಶರಾಗಿದ್ದು, ಪತಿ ಅಗಲಿಕೆಯ ನೋವಿನಿಂದ ಹೊರಬರಲು ನೀತು ಕಪೂರ್ ಮತ್ತೆ ಹಿರಿತೆರೆಗೆ ಮರಳಿದ್ದಾರೆ. ಅವರ ಅಭಿನಯದ ಸಿನಿಮಾ ಇದೇ ವಾರ ತೆರೆಕಂಡಿದೆ.
ಚಿತ್ರದ ಪ್ರಮೋಷನ್ ನಲ್ಲಿ ಸಹ ನಟರ ಜೊತೆ ನೀತು ಕಪೂರ್ ಬ್ಯುಸಿಯಾಗಿದ್ದು, ಇದರ ಮಧ್ಯೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ವಿವಾಹ ದಿನದಂದು ನಡೆದ ಸ್ವಾರಸ್ಯಕರ ಘಟನೆಯನ್ನು ವಿವರಿಸಿದ್ದಾರೆ. ತಮ್ಮ ಮತ್ತು ರಿಷಿ ಕಪೂರ್ ನಡುವಿನ ಬಾಂಧವ್ಯದ ಕುರಿತು ಅವರು ಈ ಮೂಲಕ ಬಹಿರಂಗಪಡಿಸಿದ್ದಾರೆ.
1980 ರಲ್ಲಿ ಸಿನಿರಂಗದಲ್ಲಿ ಉತ್ತುಂಗದಲ್ಲಿದ್ದ ವೇಳೆಯೇ ರಿಷಿ ಕಪೂರ್ ಹಾಗೂ ನೀತು ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ವಿವಾಹ ಸಮಾರಂಭಕ್ಕೆ 5 ಸಾವಿರಕ್ಕೂ ಅಧಿಕ ಮಂದಿ ಬಂದಿದ್ದರಂತೆ. ಈ ಜನಸ್ತೋಮವನ್ನು ನೋಡಿ ನೀತು ಕಪೂರ್ ಅವರಿಗೆ ನರ್ವಸ್ ಆಗಿದ್ದು, ಇದೇ ಪರಿಸ್ಥಿತಿಯಲ್ಲಿದ್ದ ರಿಶಿಕಪೂರ್ ಬಳಿಕ ನೀತುಗೆ ಮದ್ಯ ಕೊಟ್ಟು ತಾವೂ ಸೇವಿಸಿದ್ದರಂತೆ. ನಂತರ ಧೈರ್ಯದಿಂದ ಈ ಜೋಡಿ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಯಿತಂತೆ.