2002 ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರದಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತಿತರರ ವಿರುದ್ಧ ಆರೋಪ ಮಾಡಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಿದೆ.
ಈ ತೀರ್ಪಿನ ಬಳಿಕ ಎಎನ್ಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿರುದ್ಧ ಕೇಳಿ ಬಂದ ಸುಳ್ಳು ಆರೋಪದಿಂದ ಎಷ್ಟು ನೊಂದಿದ್ದರು ಎಂಬುದು ನನಗೆ ತಿಳಿದಿದೆ. ಪ್ರಕರಣ ನ್ಯಾಯಾಲಯದಲ್ಲಿದ್ದ ಕಾರಣ ಅವರು 19 ವರ್ಷಗಳ ಕಾಲ ಏನನ್ನೂ ಮಾತನಾಡದೆ ವಿಷಕಂಠ ನಂತೆ ತಮ್ಮ ನೋವನ್ನು ನುಂಗಿಕೊಂಡಿದ್ದರು ಎಂದು ತಿಳಿಸಿದ್ದಾರೆ.

ಇದೀಗ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ನರೇಂದ್ರ ಮೋದಿಯವರು ಈ ಸುಳ್ಳು ಆರೋಪದಿಂದ ಮುಕ್ತರಾಗಿದ್ದಾರೆ. 19 ವರ್ಷಗಳ ಕಾಲ ಅವರು ಈ ನೋವನ್ನು ಸಹಿಸಿಕೊಂಡಿದ್ದಾರೆಂದರೆ ಅದು ಗಟ್ಟಿ ಹೃದಯದವರಿಂದ ಮಾತ್ರ ಸಾಧ್ಯ. ಸತ್ಯ ಎಂದಿದ್ದರೂ ಹೊರಬರುತ್ತದೆ ಎಂಬುದು ಈ ಮೂಲಕ ಸಾಬೀತಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.