ಬೆಳಗಾವಿ; 7 ನವಜಾತ ಶಿಶುಗಳನ್ನು ಹಳ್ಳಕ್ಕೆ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕೋಣಿ, ಜಿಲ್ಲೆಯ ಪ್ರಸಿದ್ಧ ಹೆರಿಗೆ ಆಸ್ಪತ್ರೆಯನ್ನು ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ತನಿಖೆ ವೇಳೆ ಬೆಳಗಾವಿಯ ವೆಂಕಟೇಶ್ ಹೆರಿಗೆ ಆಸ್ಪತ್ರೆಯ ಸಿಬ್ಬಂದಿಗಳ ಎಡವಟ್ಟು ಬಯಲಾಗಿದ್ದು, 7 ಭ್ರೂಣಗಳನ್ನು ಡಬ್ಬಿಯಲ್ಲಿ ತುಂಬಿ ಹಳ್ಳಕ್ಕೆ ಎಸೆದಿದ್ದರು. ಜೂನ್ 23ರಂದು ರಾತ್ರಿ ಪೊಲೀಸರ ದಾಳಿ ಭೀತಿ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿಗಳು ನವಜಾತ ಶಿಶುಗಳ ಮೃತದೇಹವನ್ನು ಮೂಡಲಗಿ ಹಳ್ಳಕ್ಕೆ ಬಿಸಾಕಿದ್ದಾರೆ ಎಂದು ತಿಳಿದುಬಂದಿದೆ.
ಇದೀಗ ಆಸ್ಪತ್ರೆ ಸೀಜ್ ಮಾಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಆಸ್ಪತ್ರೆ ಹಾಗೂ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.