ಬಜಾಜ್ ಪಲ್ಸರ್ N250 ಮತ್ತು F250ನ ಹೊಸ ಕಪ್ಪು ಬಣ್ಣದ ಬೈಕ್ ಬಿಡುಗಡೆ ಮಾಡಿದೆ. ಈ ಎರಡೂ ಬೈಕ್‌ಗಳ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 1.50 ಲಕ್ಷ (ಎಕ್ಸ್ ಶೋ ರೂಂ) ಇರಲಿದೆ.
ಹೊಸ ಪಲ್ಸರ್ 250 ಟ್ವಿನ್ಸ್ ಈಗ ಡ್ಯುಯಲ್-ಚಾನೆಲ್ ಎಬಿಎಸ್ ಹೊಂದಿದೆ. ಎರಡೂ ಮಾದರಿಗಳ ಸಾಮಾನ್ಯ ಆವೃತ್ತಿಗಳು ಒನ್- ಚಾನೆಲ್ ಎಬಿಸ್ ಮಾತ್ರ ಹೊಂದಿವೆ. ಇದರ ಜೊತೆಗೆ ಎರಡೂ ಬೈಕುಗಳು ಡಾರ್ಕ್ ಪೇಂಟ್ ಹೊಂದಿವೆ. ಕಂಪನಿಯು ಇದನ್ನು ಬ್ರೂಕ್ಲಿನ್ ಬ್ಲ್ಯಾಕ್ ಪೇಂಟ್ ಶೇಡ್ ಎಂದು ಕರೆಯುತ್ತದೆ.
ಸೂಕ್ಷ್ಮವಾಗಿ ಗಮನಿಸಿದರೆ ಎರಡೂ ಮಾದರಿಗಳು ಪ್ಯಾನಲ್‌ಗಳಲ್ಲಿ ಮ್ಯಾಟ್ ಮತ್ತು ಗ್ಲಾಸ್ ಪೇಂಟ್‌ನ ಸಂಯೋಜನೆಯನ್ನು ಹೊಂದಿದೆ. ಕೊಂಚ ಸಿಲ್ವರ್ ಹೈಲೈಟ್ ಹೊಂದಿವೆ.
ಪಲ್ಸರ್ N250 ಮತ್ತು F250 ಎರಡರಲ್ಲೂ ಎಂಜಿನ್ ಹಿಂದಿನ ಮಾದರಿಯಂತೆಯೇ 249cc ಇದೆ. ಏರ್ ಮತ್ತು ಆಯಿಲ್- ಕೂಲ್ಡ್ ಸಿಂಗಲ್- ಸಿಲಿಂಡರ್ ಎಂಜಿನ್‌ನಿಂದ 24.5ಎಚ್‌ಪಿ ಮತ್ತು 21.5ಎನ್‌ಎಂ ಗರಿಷ್ಠ ಟಾರ್ಕ್ ಅನ್ನು 6,500 ಆರ್ ಪಿಎಂನಲ್ಲಿ ಲಭ್ಯವಾಗಲಿದೆ.
ಬೈಕ್‌ಗಳು ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಮೊನೊ- ಶಾಕ್‌ಗಳನ್ನು ಹೊಂದಿವೆ. ಅಲ್ಲದೆ ಬೈಕ್‌ಗಳು 14 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯ ಹೊಂದಿವೆ.