ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳ ಹವಾ ಶುರುವಾಗ್ತಿದೆ. ಆರಂಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳು ದುಬಾರಿ ಅನ್ನೋ ಭಾವನೆಯಿತ್ತು. ಆದ್ರೆ ಪೆಟ್ರೋಲ್ ಚಾಲಿತ ಸ್ಕೂಟರ್ಗಿಂತಲೂ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಸ್ಕೂಟರ್ಗಳು ಲಭ್ಯವಿವೆ. ಅವು ಯಾವ್ಯಾವುವು ಅನ್ನೋದನ್ನು ವಿವರವಾಗಿ ನೋಡೋಣ.
ಏವನ್ ಇ ಸ್ಕೂಟ್ – ಬೆಲೆ 45,000 ರೂ
ಈ ಎಲೆಕ್ಟ್ರಿಕ್ ಸ್ಕೂಟರ್ 215 ವ್ಯಾಟ್ BLDC ಮೋಟಾರ್ ಅನ್ನು ಹೊಂದಿದೆ. ಇದರ 48v/20ah ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗಲು 6-8 ಗಂಟೆಗಳು ಬೇಕು. ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದ್ರೆ ಈ ಸ್ಕೂಟರ್ 65 ಕಿಮೀ ದೂರ ಚಲಿಸುತ್ತದೆ. ಗಂಟೆಗೆ 24 ಕಿಮೀ ವೇಗವನ್ನು ಹೊಂದಿದೆ.
ಬೌನ್ಸ್ ಇನ್ಫಿನಿಟಿ E1 – ಬೆಲೆ 45,099 ರೂ
ಬೌನ್ಸ್ ಇನ್ಫಿನಿಟಿ E1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎರಡು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಬ್ಯಾಟರಿ ಪ್ಯಾಕ್ ಇಲ್ಲದ ಇನ್ಫಿನಿಟಿ ಇ1 ಬೆಲೆ 45,099 ರೂಪಾಯಿ ಮತ್ತು ಬ್ಯಾಟರಿ ಪ್ಯಾಕ್ ಹೊಂದಿರುವ ಇನ್ಫಿನಿಟಿ ಇ1 ಬೆಲೆ 68,999 ರೂಪಾಯಿ. ಇದು 1500 ವ್ಯಾಟ್ BLDC ಮೋಟಾರ್ ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದ್ರೆ 85 ಕಿಮೀ ದೂರ ಚಲಿಸುವ ಸಾಮರ್ಥ್ಯ ಹೊಂದಿದೆ.
ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ – ಬೆಲೆ 46,640 ರೂ
ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ ಸ್ಕೂಟರ್ನ ಆರಂಭಿಕ ಬೆಲೆ 46,640 ರೂಪಾಯಿ ಇದ್ದು, ಟಾಪ್ ಮಾಡೆಲ್ ಸ್ಕೂಟರ್ಗಳು 59,640 ರೂಪಾಯಿಗೆ ಸಿಗುತ್ತಿವೆ. ಇ-ಸ್ಕೂಟರ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. LX VRLA ಮತ್ತು ಉನ್ನತ ರೂಪಾಂತರವಾದ ಫ್ಲ್ಯಾಶ್ LX. ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ ಗಂಟೆಗೆ 25 ಕಿಮೀ ವೇಗವನ್ನು ಹೊಂದಿದೆ ಮತ್ತು 85 ಕಿಮೀ ಚಲಿಸಬಲ್ಲದು.
ಅವನ್ ಟ್ರೆಂಡ್ ಇ – ಬೆಲೆ 56,900 ರೂ
ಅವನ್ ಟ್ರೆಂಡ್ ಇ ಸ್ಕೂಟರ್ ಅನ್ನು ಎರಡು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ. ಸಿಂಗಲ್-ಬ್ಯಾಟರಿ ಪ್ಯಾಕ್ ಮತ್ತು ಡಬಲ್-ಬ್ಯಾಟರಿ ಪ್ಯಾಕ್ ನಲ್ಲಿ ಇದು ಲಭ್ಯವಿದೆ. ಸಿಂಗಲ್-ಬ್ಯಾಟರಿ ಚಾಲಿತ ರೂಪಾಂತರವು 60 ಕಿಮೀ ವ್ಯಾಪ್ತಿಯನ್ನು ಹೊಂದಿದ್ದರೆ ಡಬಲ್-ಬ್ಯಾಟರಿ ಚಾಲಿತ ರೂಪಾಂತರವು 110 ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಎರಡೂ ರೂಪಾಂತರಗಳ ಗರಿಷ್ಠ ವೇಗ ಗಂಟೆಗೆ 45 ಕಿಮೀ.