alex Certify BIG NEWS: ಅಯೋಧ್ಯೆಯ ಸರಯೂ ನದಿಯಲ್ಲಿ ಪತ್ನಿಗೆ ಮುತ್ತಿಕ್ಕಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಗೂಸಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಯೋಧ್ಯೆಯ ಸರಯೂ ನದಿಯಲ್ಲಿ ಪತ್ನಿಗೆ ಮುತ್ತಿಕ್ಕಿದ ವ್ಯಕ್ತಿಗೆ ಹಿಗ್ಗಾಮುಗ್ಗಾ ಗೂಸಾ

ವ್ಯಕ್ತಿಯೊಬ್ಬ ತನ್ನ ಪತ್ನಿ ಜೊತೆ ಅಯೋಧ್ಯೆಯ ಪವಿತ್ರ ಸರಯೂ ನದಿಯಲ್ಲಿ ಸ್ನಾನ ಮಾಡುತ್ತಿರುವಾಗಲೇ ಆಕೆಗೆ ಮುತ್ತು ಕೊಟ್ಟಿದ್ದು, ಇದರಿಂದ ಆಕ್ರೋಶಗೊಂಡ ಭಕ್ತರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಾರದ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸರಯೂ ನದಿ ತಟದಲ್ಲಿರುವ Ram ki Paidi ಘಾಟ್‌ ನಲ್ಲಿ ಈ ದಂಪತಿಗಳು ಸ್ನಾನ ಮಾಡುತ್ತಿದ್ದರು. ಈ ವೇಳೆ ಪತಿ, ಪತ್ನಿ ಪರಸ್ಪರ ಮುತ್ತು ಕೊಟ್ಟುಕೊಂಡಿದ್ದಾರೆ. ಇವರಿಬ್ಬರ ವರ್ತನೆಯನ್ನು ಗಮನಿಸುತ್ತಿದ್ದ ಭಕ್ತರು ಗರಂ ಆಗಿದ್ದಾರೆ.

ನೀರಿನಲ್ಲಿದ್ದಾಗಲೇ ಆತನ ಕೈ ಹಿಡಿದೆಳೆದು ಏಟು ಕೊಟ್ಟಿದ್ದಾರೆ. ಆತನ ಪತ್ನಿ ಬಿಡಿಸಿಕೊಳ್ಳಲು ಯತ್ನಿಸಿದ್ದು, ಆದರೆ ಅಷ್ಟಕ್ಕೆ ಸುಮ್ಮನಾಗದ ಭಕ್ತರ ಗುಂಪು ದಡದ ಮೇಲೆಳೆದುಕೊಂಡು ಮತ್ತೆ ಥಳಿಸಿದೆ. ವೈರಲ್‌ ವಿಡಿಯೋ ಕುರಿತಂತೆ ಪ್ರತಿಕ್ರಿಯಿಸಿರುವ ಸ್ಥಳೀಯ ಠಾಣಾಧಿಕಾರಿ, ಈ ಕುರಿತು ಯಾವುದೇ ದೂರು ತಮಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...