ಕೆಲವೊಂದು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬಂಪರ್ ವೇತನವನ್ನು ನೀಡುತ್ತವೆ. ಅದರಲ್ಲೂ ಐಟಿ ಕಂಪನಿಗಳು ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು, ಪ್ರತಿಭಾವಂತರಾದ ಪ್ರೆಷರ್ಸ್ ಗಳಿಗೂ ಸಹ ಕೋಟಿ ರೂಪಾಯಿಗಳಿಗೂ ಅಧಿಕ ವಾರ್ಷಿಕ ಪ್ಯಾಕೇಜ್ ನೀಡುತ್ತವೆ.
ಇದರ ಮಧ್ಯೆ ದೇಶದ ಬೃಹತ್ ಕಂಪನಿಗಳ ಪೈಕಿ ಒಂದಾಗಿರುವ ಐಟಿಸಿ, ತನ್ನ 220 ಉದ್ಯೋಗಿಗಳಿಗೆ ವಾರ್ಷಿಕ ಒಂದು ಕೋಟಿ ರೂಪಾಯಿಗಳಿಗೂ ಅಧಿಕ ವೇತನ ನೀಡುತ್ತಿದೆ ಎಂದು ತಿಳಿದುಬಂದಿದೆ. 2021-22ರಲ್ಲಿ ಒಂದು ಕೋಟಿ ರೂಪಾಯಿಗಿಂತ ಹೆಚ್ಚು ವೇತನ ಪಡೆಯುವ ನೌಕರರ ಪ್ರಮಾಣ ಶೇಕಡ 44 ರಷ್ಟು ಹೆಚ್ಚಳವಾಗಿದೆ ಎನ್ನಲಾಗಿದೆ.
ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಗುಡ್ ನ್ಯೂಸ್
ಈ ಮೊದಲು ಅಂದರೆ 2020-21 ರಲ್ಲಿ ಕಂಪನಿಯ 153 ನೌಕರರು ವಾರ್ಷಿಕ ಒಂದು ಕೋಟಿ ರೂಪಾಯಿಗಳಿಗಿಂತ ಅಧಿಕ ವೇತನ ಪಡೆಯುತ್ತಿದ್ದರು. ಇನ್ನು ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಪುರಿ ಅವರ ವಾರ್ಷಿಕ ಆದಾಯ ಪ್ರಸಕ್ತ ಸಾಲಿನಲ್ಲಿ 12.59 ಕೋಟಿ ರೂಪಾಯಿ ಎಂದು ಕಂಪನಿಯ ವರದಿ ಹೇಳಿದೆ.