ಸಂಜೆ ವೇಳೆ ಟೀ ಕುಡಿಯುವಾಗ ಏನಾದರೂ ಬಿಸಿಬಿಸಿಯಾಗಿರುವ ಬಜ್ಜಿ ಬೋಂಡವಿದ್ರೆ ಸವಿಯಬಹುದು ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ಹಾಗಾಗಿ ರುಚಿಕರವಾಗಿ ಮೆಣಸಿನಕಾಯಿ ಬಜ್ಜಿ ಮಾಡುವ ವಿಧಾನ ಇಲ್ಲಿದೆ ನೋಡಿ. ಮಾಡುವುದಕ್ಕೆ ಕೂಡ ಸುಲಭವಿದೆ. ಮನೆಯಲ್ಲಿ ಟ್ರೈ ಮಾಡಿನೋಡಿ.
ಬೇಕಾಗುವ ಸಾಮಾಗ್ರಿ:
150 ಗ್ರಾಂ ಕಡಲೆಹಿಟ್ಟು, ಅರಿಶಿನ ಪುಡಿ-1/2 ಟೀ ಸ್ಪೂನ್, ಖಾರದ ಪುಡಿ-1/2 ಟೇಬಲ್ ಸ್ಪೂನ್, ಜೀರಿಗೆ ಪುಡಿ-1/2 ಟೇಬಲ್ ಸ್ಪೂನ್, ಬಜ್ಜಿ ಮೆಣಸಿನ ಕಾಯಿ,-4 ಮಧ್ಯಕ್ಕೆ ಭಾಗ ಮಾಡಿಟ್ಟುಕೊಳ್ಳಿ. ಚಾಟ್ ಮಸಾಲ-1/4 ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು-1/2 ಕಪ್, ಕ್ಯಾರೆಟ್-1/4 ಕಪ್, ಈರುಳ್ಳಿ-1/2 ಕಪ್, ಎಣ್ಣೆ-ಕರಿಯಲು ಬೇಕಾದಷ್ಟು, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ:
ಒಂದು ಬೌಲ್ ಗೆ ಕಡಲೆಹಿಟ್ಟು ಹಾಕಿ. ನಂತರ ಅದಕ್ಕೆ ಖಾರದ ಪುಡಿ ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪುಡಿ ಸೇರಿಸಿ ಮಿಶ್ರಣ ಮಾಡಿ. ನಂತರ ಇದಕ್ಕೆ ನೀರು ಸೇರಿಸಿ ಗಂಟಿಲ್ಲದಂತೆ ಕಲಸಿ. ಈ ಮಿಶ್ರಣ ದೋಸೆ ಹಿಟ್ಟಿನ ಹದಕ್ಕೆ ಇರಲಿ. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ.
ಬಜ್ಜಿ ಮೆಣಸಿನಕಾಯಿಯನ್ನು ಕಡಲೆಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ನಂತರ ಒಂದು ಬೌಲ್ ಗೆ ಕ್ಯಾರೆಟ್ ತುರಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ನಿಂಬೆ ಹಣ್ಣಿನ ರಸ, ಚಾಟ್ ಮಸಾಲ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಬಜ್ಜಿ ಜತೆ ತಿನ್ನಿರಿ.