ರಾಷ್ಟ್ರಪತಿ ಸ್ಥಾನಕ್ಕೆ ಪ್ರತಿಪಕ್ಷಗಳು ತಮ್ಮ ಅಭ್ಯರ್ಥಿಯನ್ನಾಗಿ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಅವರನ್ನು ಕಣಕ್ಕಿಳಿಸುತ್ತಿರುವುದು ಸಿನ್ಹಾ ಅವರ ಪುತ್ರ ಬಿಜೆಪಿ ಸಂಸದ ಜಯಂತ್ ಸಿನ್ಹಾ ಅವರಿಗೆ ತೀವ್ರ ಮುಜುಗರವನ್ನುಂಟು ಮಾಡಿದೆ.
ಈ ಮುಜುಗರದಿಂದ ಹೊರಬರಲು ಜಯಂತ್ ಸಿನ್ಹಾ, `ನಾನು ಯಶವಂತ ಸಿನ್ಹಾ ಮಗ ಎಂಬ ಕಾರಣಕ್ಕೆ ಈ ವಿಚಾರದಲ್ಲಿ ನನ್ನ ಕಡೆ ನೋಡಬೇಡಿʼ ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, `ಪ್ರತಿಪಕ್ಷಗಳು ನನ್ನ ತಂದೆ ಯಶವಂತ ಸಿನ್ಹಾ ಅವರನ್ನು ರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುತ್ತಿರುವುದು ತಿಳಿಯಿತು. ಈ ವಿಚಾರವಾಗಿ ಅನೇಕ ಜನರು ಮತ್ತು ಮಾಧ್ಯಮ ಮಿತ್ರರು ನನಗೆ ಕರೆ ಮಾಡಿ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಆದರೆ, ನಾನು ಬಿಜೆಪಿಯ ಶಿಸ್ತಿನ ಸಿಪಾಯಿಯಾಗಿದ್ದೇನೆ. ಈ ವಿಚಾರವನ್ನು ಕುಟುಂಬದ ವಿಚಾರವನ್ನಾಗಿ ಮಾಡಬೇಡಿ ಮತ್ತು ಈ ಬಗ್ಗೆ ನನ್ನ ಕಡೆ ನೋಡಬೇಡಿ ಎಂದು ಮನವಿ ಮಾಡುತ್ತಿದ್ದೇನೆ ಎಂದು ಜಯಂತ್ ಸಿನ್ಹಾ ಮನವಿ ಮಾಡಿದ್ದಾರೆ.