ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. 2015ರ ಜೂನ್ 25ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ಕೊಟ್ಟಿದ್ದರು. ನಗರ ಪ್ರದೇಶಗಳಲ್ಲಿ ಎಲ್ಲರಿಗೂ ವಸತಿ ಒದಗಿಸುವುದು ಪಿಎಂ ಆವಾಸ್ ಯೋಜನೆಯ ಉದ್ದೇಶ.
PMAY-U ಅಡಿಯಲ್ಲಿ ಎಲ್ಲಾ ಅರ್ಹ ಕುಟುಂಬಗಳು ಅಥವಾ ಫಲಾನುಭವಿಗಳಿಗೆ 1.12 ಕೋಟಿ ಮನೆಗಳನ್ನು ನಿರ್ಮಿಸುವ ಪ್ರಸ್ತಾವನೆಯನ್ನು ಈಗಾಗ್ಲೇ ಕೇಂದ್ರ ಸರ್ಕಾರ ಅನುಮೋದಿಸಿದೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸೆಂಟ್ರಲ್ ನೋಡಲ್ ಏಜೆನ್ಸಿಗಳ ಮೂಲಕ ಎಲ್ಲಾ ಅರ್ಹ ಕುಟುಂಬಗಳು ಅಥವಾ ಫಲಾನುಭವಿಗಳಿಗೆ ಮನೆಗಳನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ನೆರವಾಗಲಿದೆ.
ಈ ಯೋಜನೆ ಅಡಿಯಲ್ಲಿ ಕುಟುಂಬದ ಮಹಿಳೆ ಅಥವಾ ಮನೆಯೊಡತಿ, ಮನೆಯ ಮಾಲೀಕಳು ಅಥವಾ ಸಹ ಮಾಲೀಕಳಾಗಬೇಕೆಂಬ ಕಡ್ಡಾಯ ನಿಯಮವಿದೆ. ಅಧಿಕೃತ ವೆಬ್ಸೈಟ್ನಲ್ಲೇ ಈ ಬಗ್ಗೆ ಸೂಚನೆ ನೀಡಲಾಗಿದೆ.
ನೀವು ಸಹ ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಿದ್ದರೆ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬಹುದು. ಅದಕ್ಕಾಗಿ ಹಂತ-ಹಂತದ ವಿವರಗಳು ಇಲ್ಲಿವೆ.
1: ಮೊದಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ – pmaymis.gov.in ಗೆ ವಿಸಿಟ್ ಮಾಡಿ.
2: ನ್ಯಾವಿಗೇಶನ್ ಬಾರ್ನಲ್ಲಿ ಲಭ್ಯವಿರುವ ‘ಸರ್ಚ್ ಬೆನಿಫಿಶಿಯರಿ’ ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಡ್ರಾಪ್-ಡೌನ್ ಮೆನು ಇರುತ್ತದೆ.
3: ಮೆನುವಿನಿಂದ ‘ಸರ್ಚ್ ಬೈ ನೇಮ್’ ಆಪ್ಷನ್ ಅನ್ನು ಕ್ಲಿಕ್ ಮಾಡಿ.
4: ನಿಮ್ಮ ಹೆಸರನ್ನು ನಮೂದಿಸಿ ಮತ್ತು ‘ಸರ್ಚ್’ ಆಪ್ಷನ್ ಮೇಲೆ ಕ್ಲಿಕ್ ಮಾಡಿ.ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅರ್ಜಿದಾರರು ‘ಸರ್ಚ್’ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ನಂತರ PMAY-ನಗರದ ಲಿಸ್ಟ್ಗೆ ಪ್ರವೇಶವನ್ನು ಪಡೆಯುತ್ತೀರಿ. ನೀವು ಆಯ್ಕೆ ಮಾಡಿದ ಹೆಸರುಗಳು, ಹಾಗೆ ಯಾವುದೇ ಇತರ ಸಂಬಂಧಿತ ಮಾಹಿತಿಗಾಗಿ ನಂತರ ಸರ್ಚ್ ಮಾಡಬಹುದು.