ಕೆಲವು ಬಾರಿ ಬಟ್ಟೆ ಒಗೆದು ಒಣಗಿಸಿದ ಬಳಿಕವೂ ಅದರ ಕಮಟು ವಾಸನೆ ದೂರವಾಗಿರುವುದಿಲ್ಲ. ಅದಕ್ಕೆ ಹಲವು ಕಾರಣಗಳಿರಬಹುದು. ನಿಮ್ಮ ದೇಹದ ಕಟುವಾದ ದುರ್ಗಂಧ, ಡಿಟರ್ಜೆಂಟ್ ಗಳ ಸಮಸ್ಯೆ, ನೀರು ಅಥವಾ ಒಣಗಿಸಿದ ಕ್ರಮದಿಂದ ಹಾಗಾಗಿರಬಹುದು. ಅದನ್ನು ತಪ್ಪಿಸಲು ಏನು ಮಾಡಬಹುದು…?
ವಾಷಿಂಗ್ ಮೆಷಿನ್ ನಲ್ಲಿ ಒಗೆದ ಬಳಿಕವೂ ಹೆಚ್ಚು ಹೊತ್ತು ಬಟ್ಟೆಯನ್ನು ಅಲ್ಲೇ ಬಿಡುವುದರಿಂದ ಅದರ ವಾಸನೆ ಬದಲಾಗುತ್ತದೆ. ಅಗತ್ಯಕ್ಕೂ ಹೆಚ್ಚಿನ ಪ್ರಮಾಣದ ಡಿಟರ್ಜೆಂಟ್ ಬಳಸುವುದು ಅಥವಾ ಬಹಳ ಕಡಿಮೆ ಪ್ರಮಾಣದಲ್ಲಿ ಬಳಸುವುದರಿಂದ ವಾಸನೆ ಹೆಚ್ಚಾಗುತ್ತದೆ.
ಅಲ್ಲದೆ ಬಹಳ ಕಾಲದವರೆಗೆ ನಿಮ್ಮ ಯಂತ್ರವನ್ನು ಪೂರ್ತಿಯಾಗಿ ಸ್ವಚ್ಛಗೊಳಿಸದೆ ಇದ್ದರೂ ಈ ಸಮಸ್ಯೆ ಕಾಣಿಸಬಹುದು.
ಬಿಸಿಲಿನಲ್ಲಿ ಒಣಗಿಸದೆ ಇದ್ದರೂ ಬಟ್ಟೆಯಿಂದ ವಾಸನೆ ಬರುತ್ತದೆ.
ಯಂತ್ರದೊಳಗೆ ಕನಿಷ್ಠ ಭಾರದ ಬಟ್ಟೆಗಳನ್ನು ಹಾಕಿದಾಗ ಮಾತ್ರ ಅದರಿಂದ ಸರಿಯಾದ ಒಗೆತವನ್ನು ಪಡೆಯಬಹುದು. ಹಾಗಾಗಿ ಯಂತ್ರದ ತಯಾರಕರು ಕೊಟ್ಟ ಸೂಚನೆಗಳನ್ನು ಸರಿಯಾಗಿ ಓದಿ ಅನುಸರಿಸಿ.
ಡಿಟರ್ಜೆಂಟ್ ಹಾಕುವ ಜಾಗದಲ್ಲಿ ಸ್ವಲ್ಪ ಪ್ರಮಾಣದ ದ್ರವ ಉಳಿದಿದ್ದರೆ ಅದು ಕಮಟು ವಾಸನೆ ಬೀರಲು ಕಾರಣವಾಗಬಹುದು. ಹಾಗಾಗಿ ಪದೇ ಪದೇ ಆ ಭಾಗವನ್ನು ಸ್ವಚ್ಛಗೊಳಿಸುತ್ತಿರಿ.
ಯಂತ್ರದ ಬಾಗಿಲಿನ ಅಂಚಿನಲ್ಲಿರುವ ರಬ್ಬರ್ ಸೀಲ್ ಅನ್ನು ಬೆಚ್ಚಗಿನ ಮತ್ತು ಒದ್ದೆಯಾದ ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಿ. ಕುಕ್ಕರ್ ರಬ್ಬರ್ ನಂತೆಯೇ ಇದಕ್ಕೂ ತಿಂಗಳಿಗೊಮ್ಮೆ ತುಸುವೇ ತೆಂಗಿನೆಣ್ಣೆ ಸವರಿ ಒಣಗಲು ಬಿಡಿ. ಇದರಿಂದ ರಬ್ಬರ್ ದೀರ್ಘಕಾಲ ಬಾಳಿಕೆ ಬರುತ್ತದೆ.