ಟಾಲಿವುಡ್ ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ಈ ಜೋಡಿ ನೋಡ್ತಿದ್ರೆನೇ ದೃಷ್ಟಿ ತಾಕುವ ಹಾಗಿತ್ತು. ಅದ್ಯಾರ ವಕ್ರದೃಷ್ಟಿ ಬಿತ್ತೋ ಏನೋ ಇಬ್ಬರು, ಮದುವೆಯಾದ 4 ವರ್ಷಗಳ ನಂತರ ವಿಚ್ಛೇದನ ಪಡೆದು ಬೇರೆ-ಬೇರೆಯಾದರು. ಆ ನಂತರ ಇಬ್ಬರೂ ತಮ್ಮ ತಮ್ಮ ಸಿನೆಮಾಗಳಲ್ಲಿ ಬ್ಯುಸಿಯಾಗಿ ಬಿಟ್ಟರು.
ಸಮಂತಾ ಮತ್ತು ನಾಗಚೈತನ್ಯ ಇವರ ಬಗ್ಗೆ ಸುದ್ದಿಗಳು ಆಗಾಗ ಕೇಳಿ ಬಂದರೂ, ಇಬ್ಬರು ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈ ಬಾರಿ ನಾಗಚೈತನ್ಯ ಸುದ್ದಿಯೊಂದು ಹರಿದಾಡ್ತಿದ್ದು, ಆ ಸುದ್ದಿಯನ್ನ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಬಿಕಾಸ್ ನಾಗಚೈತನ್ಯ ಈ ಬಾರಿ ಸುದ್ದಿಯಲ್ಲಿರೋದು ತಮ್ಮ ಲೇಟೆಸ್ಟ್ ಗರ್ಲ್ಫ್ರೆಂಡ್ನಿಂದಾಗಿ. ಆ ಗರ್ಲ್ಫ್ರೆಂಡ್ ಹೆಸರು ನಟಿ ಶೋಭಿತಾ ದುಲಿಪಾಲಾ
ನಟಿ ಶೋಭಿತಾ ದುಲಿಪಾಲಾ ಮತ್ತು ನಾಗಚೈತನ್ಯ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಗುಸುಗುಸು ಸುದ್ದಿ ಕೇಳಿ ಬರ್ತಾ ಇದೆ. ಶೋಭಿತಾ ಭೇಟಿ ಆಗೋದಕ್ಕಂತಾನೇ ನಾಗಚೈತನ್ಯ ಜುಬ್ಲಿ ಹಿಲ್ಸ್ ನಲ್ಲಿ ಹೊಸ ಮನೆಯನ್ನ ಮಾಡಿದ್ದಾರಂತೆ. ಆಗಾಗ ನಾಗಚೈತನ್ಯ ಅಲ್ಲಿ ಹೋಗಿ ಬರುವುದು ಸಾಮಾನ್ಯವಾಗಿದೆ. ಹೀಗೆ ಇವರಿಬ್ಬರು ಕದ್ದು ಮುಚ್ಚಿ ಓಡಾಡೋದನ್ನ ನೋಡಿದವರು ಇವರಿಬ್ಬರ ನಡುವೆ ಏನೋ ಸಮ್ಥೀಂಗ್ ಇದೆ ಅಂತ ಹೇಳಿದ್ದಾರೆ.
ಇತ್ತೀಚೆಗೆ ಮೇಜರ್ ಸಿನಿಮಾ ಶೂಟಿಂಗ್ ವೇಳೆಯೂ ನಾಗಚೈತನ್ಯ, ಶೋಭಿತಾರನ್ನು ಭೇಟಿಯಾಗಲು ಹಲವು ಬಾರಿ ಬಂದಿದ್ದರಂತೆ. ಹೀಗೆ ಬಂದಿದ್ದನ್ನ ನೋಡಿಯೇ ಇವರಿಬ್ಬರ ಬಗ್ಗೆ ಗಾಸಿಪ್ ಶುರುವಾಗಿದೆ. ಈ ಸುದ್ದಿ ನಟಿವರೆಗೂ ತಲುಪಿದ್ದು, ಇದೆಲ್ಲ ಸುಳ್ಳು ಸುದ್ದಿ ಅಂತ ಅವರು ಕ್ಲಿಯರ್ ಕಟ್ ಆಗಿ ಹೇಳಿದ್ದಾರೆ. ಆದರೆ ಒಂದಂತೂ ಸತ್ಯ ಸಿನೆಮಾ ಜಗತ್ತಿನಲ್ಲಿ ಬೆಂಕಿ ಇಲ್ಲದೆ ಹೊಗೆ ಆಡೋದಕ್ಕೆ ಸಾಧ್ಯವೇ ಇಲ್ಲ.