ಜ್ಯೋತಿಷ್ಯ ಶಾಸ್ತ್ರದಲ್ಲಿ ಮುಖ ನೋಡಿ ಭವಿಷ್ಯ ಹೇಳಲಾಗುತ್ತದೆ. ಮನೆಗೆ ಬರುವ ಸೊಸೆ ಭಾಗ್ಯ ತರಲಿ ಎಂದು ಜನರು ಆಶಿಸ್ತಾರೆ. ಅನೇಕ ಗುಣ, ಲಕ್ಷಣಗಳನ್ನು ನೋಡಿ, ಜಾತಕ ಹೊಂದಿಸಿ ಮನೆಗೆ ಸೊಸೆ ತರ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ಸೊಸೆ ಹೆಚ್ಚು ಭಾಗ್ಯ ತರಬಲ್ಲಳು ಎಂಬುದನ್ನೂ ಹೇಳಲಾಗಿದೆ.
ಮೂಗಿನ ಮೇಲೆ ಮಚ್ಚೆಯಿರುವ ಹುಡುಗಿ ಅದೃಷ್ಟ ತರ್ತಾಳೆ ಎನ್ನಲಾಗಿದೆ. ಮೂಗಿನ ಮೇಲಿನ ಮಚ್ಚೆ ಸಂಪತ್ತಿನ ಸೂಚಕವಾಗಿದೆ. ಈ ಹುಡುಗಿ ಯಾರ ಮನೆಗೆ ಹೋಗ್ತಾಳೋ ಅಲ್ಲಿ ಸಂಪತ್ತು ನೆಲೆಸಿರುತ್ತದೆ.
ಹೆಣ್ಣು ಮಗುವಿನ ಕಾಲಿನ ಬೆರಳಿನಲ್ಲಿ ಶಂಖ, ಕಮಲ, ಚಕ್ರದ ಚಿಹ್ನೆಯಿದ್ರೆ ಶುಭವೆಂದು ಹೇಳಲಾಗುತ್ತದೆ. ಇಂತ ಗುರುತು ಕೆಲವೇ ಕೆಲವು ಹುಡುಗಿಯರಲ್ಲಿ ಕಂಡು ಬರುತ್ತದೆ.
ಮಹಿಳೆಯರು ಹೊಕ್ಕಳ ಕೆಳಗೆ ಹಚ್ಚೆ ಹೊಂದಿದ್ದರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ.
ಹಣೆಯ ಮಧ್ಯದಲ್ಲಿ ಮಚ್ಚೆಯಿದ್ರೆ ಅಂತ ಮಹಿಳೆ ಅದೃಷ್ಟ ತರ್ತಾಳೆ ಎಂದರ್ಥ. ಪತಿ ಭವಿಷ್ಯದ ಮೇಲೂ ಆಕೆ ಪ್ರಭಾವ ಬೀರ್ತಾಳೆ.
ಎಡ ಕೆನ್ನೆ ಮೇಲೆ ಮಚ್ಚೆಯಿದ್ರೆ ಅದು ಶುಭ ಸಂಕೇತ. ರುಚಿ ರುಚಿ ಅಡುಗೆಯನ್ನು ಮಾಡುವ ಮಹಿಳೆ ಸದಾ ಮನೆಗೆ ಸಂತೋಷ ತರ್ತಾಳೆ.