ಬೇಸಿಗೆಯಲ್ಲಿ ಸೆಖೆ ತಾಳಲಾಗದೇ ಎಲ್ಲರೂ ಒದ್ದಾಡ್ತಾರೆ. ಮನೆಯಲ್ಲಿ ಕೂಲರ್, ಎಸಿ, ಫ್ಯಾನ್ ಹಾಕಿಕೊಂಡು ತಂಪಾಗಿ ಕೂರಬಹುದು. ಆದ್ರೆ ಹೊರಗೆ ಹೋದಾಗ ಸೆಖೆಯ ಹೊಡೆತಕ್ಕೆ ಒಂದೇ ಸಮ ಬೆವರು ಸುರಿಯಲಾರಂಭಿಸುತ್ತದೆ.
ಅದರಲ್ಲೂ ಮಹಿಳೆಯರಿಗಂತೂ ಮಾಡಿಕೊಂಡ ಮೇಕಪ್ ಎಲ್ಲ ಬೆವರಲ್ಲಿ ಕರಗಿ ಹೋಗುತ್ತದೆ. ಬಿಸಿಲಿನಿಂದ ಪಾರಾಗಲು ಕನ್ನಡಕ, ಟೋಪಿ ಧರಿಸಿದ್ರೂ ಪ್ರಯೋಜನವಾಗುವುದಿಲ್ಲ.
ಬಿಸಿಲಿನಿಂದ ಪಾರಾಗಲು ಧರಿಸುವ ಕ್ಯಾಪ್ಗಳು ಮತ್ತು ಕನ್ನಡಕಗಳು ಬಿಸಿಯಾಗುತ್ತವೆ. ಈ ರೀತಿ ಆಗದಂತೆ ಹೊರಗಡೆ ಓಡಾಡುವಾಗ್ಲೂ ತಂಪಾಗಿರಲು ಸಖತ್ ಐಡಿಯಾ ಒಂದಿದೆ. ಅಂತಹ ವಿಶಿಷ್ಟ ಸಾಧನವೊಂದು ಮಾರುಕಟ್ಟೆಗೆ ಬಂದಿದೆ.
ನಾವ್ ಹೇಳ್ತಿರೋದು ಪೋರ್ಟಬಲ್ ಫ್ಯಾನ್ ಸನ್ ಹ್ಯಾಟ್ ಬಗ್ಗೆ. ಸರಳವಾಗಿ ಹೇಳಬೇಕಂದ್ರೆ ಫ್ಯಾನ್ ಅಳವಡಿಸಿರುವ ಟೊಪ್ಪಿ ಇದು. ಕ್ಯಾಪ್ನಲ್ಲಿರುವ ಫ್ಯಾನ್ ಸುಡು ಬಿಸಿಲಿನಲ್ಲೂ ನಿಮ್ಮನ್ನು ತಂಪಾಗಿಡುತ್ತದೆ. ಇದಕ್ಕೆ ಕರೆಂಟ್ ಬೇಕಾಗಿಲ್ಲ, ಹಗುರವಾಗಿರುವುದರಿಂದ ಆರಾಮಾಗಿ ಧರಿಸಬಹುದು. ಬ್ಯಾಟರಿಯಿಂದ ಚಲಿಸುವ ಫ್ಯಾನ್ ಇದರಲ್ಲಿದೆ.
ನೋಡಲು ಸಾಮಾನ್ಯ ಟೋಪಿಯಂತೆ ಕಾಣುತ್ತದೆ. USB ಸಹಾಯದಿಂದ ನೀವು ಅದನ್ನು ಚಾರ್ಜ್ ಮಾಡಬೇಕು. ಅರ್ಧ ಘಂಟೆ ಚಾರ್ಜ್ ಮಾಡಿದ್ರೆ 5 ಗಂಟೆಗಳ ಕಾಲ ಅದನ್ನು ಬಳಸಬಹುದು. ಕ್ಯಾಪ್ನಲ್ಲಿರುವ ಫ್ಯಾನ್ ಅನ್ನು ಕೆಳಕ್ಕೆ ತಿರುಗಿಸಿ ಗುಂಡಿ ಒತ್ತಿದ್ರೆ ಅದು ತಿರುಗಲಾರಂಭಿಸುತ್ತದೆ. ಗಾಳಿಯು ನೇರವಾಗಿ ನಿಮ್ಮ ಮುಖಕ್ಕೆ ಬೀಸುತ್ತದೆ. ಸೆಖೆಯಿಂದ ನಿಮ್ಮನ್ನು ಪಾರು ಮಾಡಿ ತಂಪು ನೀಡುತ್ತದೆ.
ಬಲವಾದ ಬ್ಯಾಟರಿ ವ್ಯವಸ್ಥೆ ಇರುವುದರಿಂದ 4-5 ಗಂಟೆಗಳವರೆಗೆ ಫ್ಯಾನ್ ಆರಾಮಾಗಿ ತಿರುಗುತ್ತದೆ. ಈ ವಿಶಿಷ್ಟ ಕ್ಯಾಪ್ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ನಲ್ಲಿ ಲಭ್ಯವಿದೆ. ಈ ಕ್ಯಾಪ್ನ ಬೆಲೆ 500-900 ರೂಪಾಯಿವರೆಗೂ ಇದೆ. ಇದರಲ್ಲಿ ನಿಮಗೆ ಬೇಕಾದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಯುನಿಸೆಕ್ಸ್, ಅಂದರೆ ಮಹಿಳೆಯರು, ಪುರುಷರು ಯಾರು ಬೇಕಾದರೂ ಇದನ್ನು ಧರಿಸಬಹುದು. ಕ್ಯಾಪ್ ಹಿಂಭಾಗದಲ್ಲಿ ಕ್ಲಿಪ್ ಇರುವುದರಿಂದ ಅಗತ್ಯಕ್ಕೆ ತಕ್ಕಂತೆ ಅಡ್ಜಸ್ಟ್ ಮಾಡಿಕೊಳ್ಳಬಹುದು.