alex Certify ತಾಂತ್ರಿಕ ದೋಷದಿಂದ ಮಧ್ಯದಲ್ಲೇ ಸ್ಥಗಿತಗೊಂಡ ಕೇಬಲ್ ಕಾರ್; ಎಲ್ಲಾ 11 ಪ್ರವಾಸಿಗರ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಂತ್ರಿಕ ದೋಷದಿಂದ ಮಧ್ಯದಲ್ಲೇ ಸ್ಥಗಿತಗೊಂಡ ಕೇಬಲ್ ಕಾರ್; ಎಲ್ಲಾ 11 ಪ್ರವಾಸಿಗರ ರಕ್ಷಣೆ

ಹಿಮಾಚಲ: ತಾಂತ್ರಿಕ ದೋಷದಿಂದಾಗಿ ಕೇಬಲ್ ಕಾರ್ ಮಧ್ಯದಲ್ಲೇ ಸ್ಥಗಿತಗೊಂಡ ಘಟನೆ ಹಿಮಾಚಲ ಪ್ರದೇಶದ ಜನಪ್ರಿಯ ಪರ್ವಾನೂ ಟಿಂಬರ್ ಟ್ರಯಲ್‌ನಲ್ಲಿ ನಡೆದಿದೆ. ಇದರಲ್ಲಿ ಸಿಕ್ಕಿಬಿದ್ದ ಎಲ್ಲ ಪ್ರವಾಸಿಗರನ್ನು ರಕ್ಷಿಸಲಾಗಿದೆ
ಸೋಮವಾರ 11 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಕೇಬಲ್ ಕಾರು ತಾಂತ್ರಿಕ ದೋಷದಿಂದ ಮಧ್ಯದಲ್ಲೇ ಸಿಲುಕಿಕೊಂಡಿದೆ. ಘಟನೆಯಲ್ಲಿ ಎಲ್ಲ ಪ್ರವಾಸಿಗರನ್ನು ರಕ್ಷಿಸಲಾಗಿದೆ.

ಕೇಬಲ್ ಕಾರ್ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಸುಮಾರು ಮೂರುವರೆ ಗಂಟೆಗಳ ಕಾಲ ಇಬ್ಬರು ಹಿರಿಯ ನಾಗರಿಕರು ಮತ್ತು ನಾಲ್ವರು ಮಹಿಳೆಯರು ಸೇರಿದಂತೆ 11 ಜನರು ಕೇಬಲ್ ಕಾರ್ ಟ್ರಾಲಿಯಲ್ಲಿ ಸಿಲುಕಿಕೊಂಡಿದ್ದರು.

BIG NEWS: ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಭಾರಿ ಮಳೆ; ಕರಾವಳಿ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ

ಸಿಕ್ಕಿಬಿದ್ದ ಪ್ರವಾಸಿಗರನ್ನು ರಕ್ಷಿಸಲು ಕೇಬಲ್ ಕಾರ್ ಅನ್ನು ನಿಯೋಜಿಸಲಾಗಿತ್ತು. ಟಿಂಬರ್ ಟ್ರಯಲ್ ಆಪರೇಟರ್‌ನ ತಾಂತ್ರಿಕ ತಂಡವೂ ಸ್ಥಳದಲ್ಲಿದ್ದು, ಕಾರ್ಯಾಚರಣೆ ನಡೆಸಿದೆ.

ಇನ್ನು, ಕೇಬಲ್ ಕಾರ್‌ನಲ್ಲಿ ಸಿಲುಕಿಕೊಂಡ ಪ್ರವಾಸಿಗರು ಭೀತಿಗೊಂಡಿದ್ದರು. ವಿಡಿಯೋ ಮೂಲಕ ಸಂದೇಶ ಹಂಚಿಕೊಂಡ ಅವರು, ಒಂದು ಗಂಟೆಗೂ ಹೆಚ್ಚು ಕಾಲ ಕೇಬಲ್ ಕಾರಿನಲ್ಲಿ ಸಿಲುಕಿಕೊಂಡರೂ ರಕ್ಷಿಸಲಾಗಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಚಂಡೀಗಢದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಟಿಂಬರ್ ಟ್ರಯಲ್ ಖಾಸಗಿ ರೆಸಾರ್ಟ್‌ನ ರೋಪ್‌ವೇ ರೈಡ್ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಪರ್ವಾನೂ ಹಿಮಾಚಲದ ತುದಿಯಲ್ಲಿ ಹರಿಯಾಣ, ಪಂಜಾಬ್ ಮತ್ತು ಚಂಡೀಗಢವನ್ನು ಸುತ್ತುವರೆದಿರುವ ಕಾರಣ ರೆಸಾರ್ಟ್ ಮುಖ್ಯವಾಗಿ ಪ್ರದೇಶದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...