ಯುವತಿಯೊಬ್ಬಳು ತಾನು ಪುರುಷನೆಂದು ನಂಬಿಸಿ ಮಹಿಳೆಯೊಬ್ಬಳನ್ನು ಮದುವೆಯಾಗಿ ಮೋಸ ಮಾಡಿದ ಘಟನೆ ನಮ್ಮ ದೇಶದಲ್ಲೇ ಇತ್ತೀಚೆಗೆ ವರದಿಯಾಗಿತ್ತು. ಮದುವೆಯಾಗಿ ಏಳು ತಿಂಗಳ ಕಾಲ ಸಂಸಾರ ನಡೆಸಿದ ನಂತರ ಮೋಸಗಾತಿಯ ಅಸಲಿಯತ್ತು ಬಯಲಾಗಿತ್ತು. ಇದೇ ರೀತಿ ಈಗ ಇಂಡೋನೇಷ್ಯಾದಲ್ಲಿ ಪ್ರಕರಣ ವರದಿಯಾಗಿದೆ.
ಹೌದು, ಇಂಡೋನೇಷ್ಯಾದ ಮಹಿಳೆಯೊಬ್ಬಳು ಮದುವೆಯಾಗಿ 10 ತಿಂಗಳ ನಂತರ ಭಾರಿ ಶಾಕ್ ಗೆ ಒಳಗಾಗಿದ್ದಾಳೆ. ವಿಲಕ್ಷಣ ಘಟನೆಯಲ್ಲಿ, ವರ ವಾಸ್ತವವಾಗಿ ಪುರುಷ ಅಲ್ಲ ಎಂದು ಮಹಿಳೆಗೆ ಅರಿವಾಗಿದೆ.
ಡೇಟಿಂಗ್ ಆ್ಯಪ್ ಮುಖಾಂತರ ಮಹಿಳೆಗೆ ಪತಿ (ಮೋಸಗಾತಿ)ಯ ಪರಿಚಯವಾಗಿದೆ. ಮೋಸಗಾತಿಯು ತಾನು ಪುರುಷನೆಂದು ನಂಬಿಸಿದ್ದಾಳೆ. ಇಬ್ಬರ ನಡುವೆ ಪ್ರೀತಿ ಮೂಡಿದ್ದು, ದಂಪತಿ ರಹಸ್ಯ ಸಮಾರಂಭದಲ್ಲಿ ವಿವಾಹವಾದ್ರು. ವಧು ತನ್ನ ಕುಟುಂಬದಿಂದ ದೂರ ಸರಿದ್ರು.
ದಂಪತಿಗಳು ದಕ್ಷಿಣ ಸುಮಾತ್ರಾಕ್ಕೆ ಸ್ಥಳಾಂತರಗೊಂಡ ನಂತರ ಇಬ್ಬರ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟವು. ಪತಿಯಂತೆ ನಾಟಕವಾಡಿದ ಮಹಿಳೆಯು ನಿರಂತರವಾಗಿ ವಧುವಿನ ಕುಟುಂಬವನ್ನು ಹಣಕ್ಕಾಗಿ ಪೀಡಿಸಿದ್ದಾಳೆ. ಕೊನೆಗೆ ಪತಿಯು ಅವನಲ್ಲ….. ಅವಳು ಎಂದು ಗೊತ್ತಾದಾಗ ಮಹಿಳೆ ಶಾಕ್ ಆಗಿದ್ದಾಳೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ವಂಚಕಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನು ಭಾರತದಲ್ಲೇ ನಡೆದಿದ್ದ ಇನ್ನೊಂದು ಪ್ರಕರಣದಲ್ಲಿ ಮೋಸಗಾತಿ ಮಹಿಳೆಯೊಬ್ಬಳು ಪುರುಷನೆಂದು ನಂಬಿಸಿ ಮಹಿಳೆಯೊಬ್ಬಳನ್ನು ವಿವಾಹವಾಗಿದ್ದಳು. ಅಲ್ಲದೆ ಈಕೆ ಸೆಕ್ಸ್ ಟಾಯ್ ಉಪಯೋಗಿಸಿ ಲೈಂಗಿಕ ಸಂಪರ್ಕವನ್ನು ಹೊಂದಿದ್ದಳು ಎಂಬುದು ತಿಳಿದಾಗ ಮಹಿಳೆಗೆ ಆಘಾತವಾಗಿತ್ತು.