
ಜುಲೈ ತಿಂಗಳಿನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ 3 ಗುಡ್ ನ್ಯೂಸ್ ಸಿಗುವ ನಿರೀಕ್ಷೆ ಇದೆ. 18 ತಿಂಗಳಿನಿಂದ ಬಾಕಿ ಇರುವ ಡಿಎ ಪಾವತಿ, ಭವಿಷ್ಯ ನಿಧಿ (ಪಿಎಫ್) ಮೇಲಿನ ಬಡ್ಡಿ ದರ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಡಿಎಯನ್ನು ಶೇ.5ರಷ್ಟು ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಡಿಎ ಹೆಚ್ಚಳಕ್ಕಾಗಿಯೇ ಕಾಯುತ್ತಿರುವ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ ಸಿಗಬಹುದು.
ಏಪ್ರಿಲ್ ತಿಂಗಳ ಎಐಸಿಪಿ ಸೂಚ್ಯಂಕವು ಡಿಎ ಏರಿಕೆ ನಿರ್ಧರಿಸುವಲ್ಲಿ ನಿರ್ಣಾಯಕ ಅಂಶವಾಗಿದೆ. ಡಿಎ ಹೆಚ್ಚಳ ಮಾಡಿದ್ರೆ ಒಟ್ಟು ನೀಡಿಕೆ 39 ಪ್ರತಿಶತವನ್ನು ತಲುಪಬಹುದು. ಶೇ.4 ರಷ್ಟು ಡಿಎ ಹೆಚ್ಚಳವಾಗಬಹುದು ಎಂದು ಈ ಹಿಂದೆ ವರದಿಗಳು ಹೇಳುತ್ತಿದ್ದವು. ಆದರೆ ಏಪ್ರಿಲ್ AICP ಸೂಚ್ಯಂಕವು ಸ್ವಲ್ಪ ಹೆಚ್ಚಿನ ಶೇಕಡಾವಾರು ಹೆಚ್ಚಳವನ್ನು ಸೂಚಿಸುತ್ತದೆ.
18 ತಿಂಗಳಿನಿಂದ ಬಾಕಿ ಉಳಿದಿರುವ ತುಟ್ಟಿಭತ್ಯೆ… 18 ತಿಂಗಳುಗಳಿಂದ ಬಾಕಿ ಉಳಿದಿರುವ ತುಟ್ಟಿಭತ್ಯೆ ಪಾವತಿ ಮಾಡಲಾಗುತ್ತದೆ ಎಂಬ ಊಹಾಪೋಹಗಳು ಕೂಡ ಕೇಳಿ ಬಂದಿದೆ. ಜನವರಿ 2020 ರಿಂದ ಜೂನ್ 2021 ರವರೆಗಿನ 18 ತಿಂಗಳ ಡಿಎ ಬಾಕಿ ಪಾವತಿಗೆ ಸಂಬಂಧಿಸಿದ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಿ ನೌಕರರು ತಮ್ಮ ಖಾತೆಗೆ ಒಂದೇ ಬಾರಿಗೆ 2 ಲಕ್ಷ ರೂಪಾಯಿ ಬಾಕಿ ಮೊತ್ತವನ್ನು ಪಡೆಯುವ ಭರವಸೆ ಮೂಡಿದೆ. ಡಿಎ ಬಾಕಿಯ ಪ್ರಮಾಣವು ನೌಕರರ ವೇತನ ಶ್ರೇಣಿ ಮತ್ತು ರಚನೆಯ ಮೇಲೆ ಅವಲಂಬಿತವಾಗಿರುತ್ತದೆ.
ಭವಿಷ್ಯ ನಿಧಿ ಬಡ್ಡಿ ವರ್ಗಾವಣೆ…
2021-22ರ ಆರ್ಥಿಕ ವರ್ಷಕ್ಕೆ ಸದಸ್ಯರ ಖಾತೆಗಳಲ್ಲಿ ಪಿಎಫ್ ಸಂಗ್ರಹಣೆಗಳ ಮೇಲೆ ಶೇ.8.10 ವಾರ್ಷಿಕ ಬಡ್ಡಿಯನ್ನು ಜಮಾ ಮಾಡಲು ಕೇಂದ್ರೀಯ ಟ್ರಸ್ಟಿಗಳ ಮಂಡಳಿ ಶಿಫಾರಸು ಮಾಡಿದೆ. ಬಡ್ಡಿದರವನ್ನು ಸರ್ಕಾರಿ ಗೆಜೆಟ್‌ನಲ್ಲಿ ಅಧಿಕೃತವಾಗಿ ತಿಳಿಸಲಾಯ್ತು. ಅದಾದ ನಂತರ ಇಪಿಎಫ್‌ಒ ಶೀಘ್ರದಲ್ಲೇ ಬಡ್ಡಿದರವನ್ನು ತನ್ನ ಚಂದಾದಾರರ ಖಾತೆಗಳಿಗೆ ಜಮಾ ಮಾಡಲು ಪ್ರಾರಂಭಿಸುತ್ತದೆ. EPFO ಪ್ರತಿ ವರ್ಷ PF ಬಡ್ಡಿ ದರವನ್ನು ಪ್ರಕಟಿಸುತ್ತದೆ.