ಬೆಂಗಳೂರು: ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ನೆರವೇರಿಸಿದ್ದು, ಈ ವೇಳೆ ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಗೆ ಚಾಲನೆ ನೀಡಿದ್ದಾರೆ.
ಬೆಂಗಳೂರಿನ ಕೊಮ್ಮಘಟ್ಟದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಈ ವೇಳೆ ರೈಲ್ವೆ ಯೋಜನೆ ಕುರಿತಾದ ಕಿರುಚಿತ್ರ ಪ್ರಸಾರ ಮಾಡಲಾಯಿತು.
ಬಾವಿಗೆ ಬಿದ್ದಿದ್ದ ಚಿರತೆಯನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು: ವಿಡಿಯೋ ವೈರಲ್
ಬೆಂಗಳೂರು ಉಪನಗರ ರೈಲು ಯೋಜನೆ 64 ನಿಲ್ದಾಣಗಳೊಂದಿಗೆ 149.348 ಕಿ.ಮೀ ಉದ್ದದ ರೈಲು ಯೋಜನೆ ಇದಾಗಿದೆ. ಈ ಯೋಜನೆಗಾಗಿ ಕೇಂದ್ರ ಸರ್ಕಾರ 2020 ಅಕ್ಟೋಬರ್ ನಲ್ಲಿ ಸುಮಾರು 15,767 ಕೋಟಿ ರೂ ಅನುಮೋದನೆ ನೀಡಿತ್ತು. ಯೋಜನೆ ಪುರ್ಣಗೊಳಿಸಲು 2026ರವರೆಗೆ ಗಡುವು ನೀಡಲಾಗಿದೆ.