ಮೈದಾನದ ಸಿಬ್ಬಂದಿಗೆ ಅಗೌರವ ತೋರಿ ಟ್ರೋಲ್ ಆದ ಋತುರಾಜ್ ಗಾಯಕ್ವಾಡ್ 20-06-2022 1:09PM IST / No Comments / Posted In: Latest News, Live News, Sports ಬೆಂಗಳೂರಿನಲ್ಲಿ ನಿನ್ನೆ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ20 ಕ್ರಿಕೆಟ್ ಪಂದ್ಯ ಮಳೆಯ ಕಾರಣದಿಂದ ಮೊಟಕುಗೊಂಡಿತು. ಭಾರತ ತಂಡ ಕೇವಲ 21 ಬಾಲ್ ಗಳನ್ನು ಎದುರಿಸಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಮಳೆ ಮತ್ತು ಮಂದ ಬೆಳಕಿನ ಕಾರಣದಿಂದ ಪಂದ್ಯವನ್ನು ರದ್ದುಪಡಿಸಲಾಯಿತು. ಇದು ಕ್ರಿಕೆಟ್ ಪ್ರೇಮಿಗಳಿಗೆ ಬೇಸರ ಉಂಟು ಮಾಡಿತು. ಇನ್ನೊಂದೆಡೆ, ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಸ್ಕ್ರೀಜ್ ನಲ್ಲಿ ತೋರಿದ ದುರ್ವರ್ತನೆ ಕ್ರಿಕೆಟ್ ಪ್ರೇಮಿಗಳ ಆಕ್ರೋಶಕ್ಕೆ ಗುರಿಯಾಗಿದೆ. ದಕ್ಷಿಣ ಆಫ್ರಿಕಾದ ಲುಂಗಿ ನಿಗಿಡಿ ಎಸೆದ ಬಾಲ್ ಗಾಯಕ್ವಾಡ್ ತಲೆಯ ಮೇಲೆ ಹೋಗುತ್ತಿದ್ದಂತೆ ಬ್ಯಾಟ್ ಗೆ ಟಚ್ ಆಗಿ ಡ್ವೈನ್ ಪ್ರಿಟೋರಿಯಸ್ ಕೈಗೆ ಸೇಫ್ ಆಗಿ ತಲುಪಿತು. ಇದು ಗಾಯಕ್ವಾಡ್ ಗೆ ಅನಿರೀಕ್ಷಿತ ಔಟಾಗಿತ್ತು. ಇದರಿಂದ ಆದ ಕೋಪವನ್ನು ಗಾಯಕ್ವಾಡ್ ಮೈದಾನದ ಸಿಬ್ಬಂದಿ ಮೇಲೆ ತೀರಿಸಿಕೊಂಡಿದ್ದಾರೆ. ಮೈದಾನದ ಸಿಬ್ಬಂದಿಗೆ ಅಗೌರವ ತೋರುವ ಮೂಲಕ ಗಾಯಕ್ವಾಡ್ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದಾರಲ್ಲದೇ, ಅವರ ವರ್ತನೆಯನ್ನು ನೋಡಿದ ನೆಟ್ಟಿಗರು ಅತ್ಯುತ್ತಮ ಬ್ಯಾಟರ್ ಒಬ್ಬ ಈ ರೀತಿ ವರ್ತಿಸುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದಿದ್ದಾರೆ. ಋತುರಾಜ್ ಗಾಯಕ್ವಾಡ್ ರದು ಅತ್ಯಂತ ಕೆಟ್ಟ ವರ್ತನೆಯಾಗಿದೆ. ತೆರೆಮರೆಯ ನಾಯಕರಂತೆ ದುಡಿಯುವ ಮೈದಾನದ ಸಿಬ್ಬಂದಿಗೆ ಈ ರೀತಿ ಅಗೌರವ ತೋರುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ ಎಂದು ನೆಟ್ಟಿಗರು ತಮ್ಮ ಸಿಟ್ಟನ್ನು ತೋಡಿಕೊಂಡಿದ್ದಾರೆ. https://twitter.com/ReignOfVirat/status/1538521237584060418?ref_src=twsrc%5Etfw%7Ctwcamp%5Etweetembed%7Ctwterm%5E1538521237584060418%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fsports%2Fruturaj-gaikwad-trolled-for-disrespecting-ground-staff-after-dismissal-during-5th-t20i-between-ind-sa-video-goes-viral-watch-5463377%2F Ruturaj should be discarded from the Team India what was that attitude bisi complete disrespect 😑 @BCCI https://t.co/sQnRFSkyLc — ARYAN_OP™ (@ARYAN__OP) June 19, 2022 Worst Behavior Ruturaj Gaikwad. They are unsung heroes and treating them like this is very disrespectful. https://t.co/rxaNZoYuWe — Vishwa (@itis_vishwa) June 19, 2022 https://twitter.com/cricketsangram/status/1538532313482469377?ref_src=twsrc%5Etfw%7Ctwcamp%5Etweetembed%7Ctwterm%5E1538532313482469377%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fsports%2Fruturaj-gaikwad-trolled-for-disrespecting-ground-staff-after-dismissal-during-5th-t20i-between-ind-sa-video-goes-viral-watch-5463377%2F