alex Certify 32ರ ಹರೆಯದಲ್ಲೇ 10 ಖಾಸಗಿ ಜೆಟ್‌ಗಳಿಗೆ ಒಡತಿ ಈ ಮಹಿಳೆ…! ಇವರ ಯಶಸ್ಸಿನ ಹಿಂದಿದೆ ಕಠಿಣ ಪರಿಶ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

32ರ ಹರೆಯದಲ್ಲೇ 10 ಖಾಸಗಿ ಜೆಟ್‌ಗಳಿಗೆ ಒಡತಿ ಈ ಮಹಿಳೆ…! ಇವರ ಯಶಸ್ಸಿನ ಹಿಂದಿದೆ ಕಠಿಣ ಪರಿಶ್ರಮ

ಇದನ್ನು ಬರೀ ಸಾಧನೆಯಲ್ಲ, ತಪಸ್ಸು ಅಂತಾನೇ ಕರೆಯಬಹುದು. ಈಕೆ 22ರ ಹರೆಯದಲ್ಲಿ ಸ್ಟಾರ್ಟಪ್‌ ಆರಂಭಿಸಿದ್ಲು. 32ನೇ ವಯಸ್ಸಿಗೆ 10 ಖಾಸಗಿ ವಿಮಾನಗಳಿಗೆ ಒಡತಿಯಾಗಿದ್ದಾಳೆ. ಆದ್ರೆ ಈ ಸಾಹಸದ ಹಿಂದೆ ಸಾಕಷ್ಟು ಶ್ರಮ, ಕಣ್ಣೀರು ಕೂಡ ಇದೆ. ನಾವ್‌ ಹೇಳ್ತಿರೋದು ಜೆಟ್‌ಸೆಟ್‌ಗೋ ಸಂಸ್ಥಾಪಕಿ ಕನಿಕಾ ಟೆಕ್ರಿವಾಲ್‌ ಬಗ್ಗೆ.

ಗೆಟ್‌ಸೆಟ್‌ಗೋ ಎಂಬುದು ಮಾಲೀಕರಿಗಾಗಿ ಚಾರ್ಟರ್ಡ್ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುವ ಮತ್ತು ಹಾರಿಸುವ ಪ್ಲೇನ್ ಅಗ್ರಿಗೇಟರ್ ಸ್ಟಾರ್ಟ್‌ಅಪ್. ಕನಿಕಾ ಟೇಕ್ರಿವಾಲ್‌ ಅವರನ್ನು ಭಾರತದ ಆಗಸದ ಊಬರ್‌ ಅಂತಾನೂ ಕರೆಯಲಾಗುತ್ತದೆ.

ಖಾಸಗಿ ವಿಮಾನ ಪ್ರಯಾಣ ಎಲ್ಲರಿಗೂ ಸಿಗುವಂತಾಗಬೇಕು ಹಾಗೂ ಪಾರದರ್ಶಕ ಮತ್ತು ಪರಿಣಾಮಕಾರಿ ಹಾರಾಟದ ಉದ್ದೇಶದಿಂದ 2012ರಲ್ಲಿ ಕನಿಕಾ ಗೆಟ್‌ಸೆಟ್‌ಗೋ ಅನ್ನು ಆರಂಭಿಸಿದ್ರು. ಮೂರು ವರ್ಷಗಳಿಂದ ಈ ಆಲೋಚನೆ ಕನಿಕಾಗೆ ಬರುತ್ತಿತ್ತಂತೆ. ಸ್ಕೆಚ್ ಬೋರ್ಡ್ ಅನ್ನು ತೆಗೆದುಕೊಂಡು ಕೆಲಸ ಮಾಡಲು ಪ್ರಾರಂಭಿಸಿದಾಗ ಆಕೆಗೆ ಕ್ಯಾನ್ಸರ್ ಇರುವುದು ಪತ್ತೆಯಾಯ್ತು. ಈ ಮಹಾಮಾರಿ ಆಕೆಯನ್ನು ಒಂದು ವರ್ಷ ಹಿಂದಕ್ಕೆ ತಳ್ಳಿತು.

ಚಿಕಿತ್ಸೆ ಮುಗಿಯುವವರೆಗೆ ಆಕೆಗೆ ಕೆಲಸ ಮಾಡಲು ಸಾಧ್ಯವಾಗಲೇ ಇಲ್ಲ. ಕನಿಕಾರ ಸ್ಟಾರ್ಟ್‌ಅಪ್ ಈಗ ಭಾರತದಲ್ಲಿ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಮತ್ತು ಲ್ಯಾಂಡಿಂಗ್ (ಇವಿಟಿಒಎಲ್) ವಿಮಾನವನ್ನು ಬಳಸಿಕೊಂಡು ಇಂಟ್ರಾ-ಸಿಟಿ ಸಂಪರ್ಕದೊಂದಿಗೆ ಏರ್ ಟ್ಯಾಕ್ಸಿಗಳ ಪ್ರವರ್ತಕವಾಗಿದೆ. ಇದು ತಂತ್ರಜ್ಞಾನ, ಅನನ್ಯ ನಿರ್ವಹಣೆ ಕಾರ್ಯವಿಧಾನಗಳು ಮತ್ತು SMART ನಿರ್ವಹಣೆಯ ಮಿಶ್ರಣವನ್ನು ಬಳಸುತ್ತದೆ – ಇವೆಲ್ಲವನ್ನೂ JetSetGo ನ ಸ್ವಾಮ್ಯದ ಗುಣಲಕ್ಷಣಗಳಿಂದ ಅಭಿವೃದ್ಧಿಪಡಿಸಲಾಗಿದೆ.

ಇದು ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಲಾಭವನ್ನು ಖಾತ್ರಿಪಡಿಸುತ್ತದೆ. ವಾಸ್ತವವಾಗಿ ಇದು ಚಾರ್ಟರ್ಡ್ ವಿಮಾನಗಳ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ, ಅವುಗಳನ್ನು ಹೆಚ್ಚು ಸುಲಭವಾಗಿ ಮತ್ತು ಆಗಾಗ್ಗೆ ಫ್ಲೈಯರ್‌ಗಳು ಪ್ರವೇಶಿಸುವಂತೆ ಮಾಡುತ್ತದೆ. ಖಾಸಗಿಯಾಗಿ ಚಾರ್ಟರ್ಡ್ ವಿಮಾನಗಳ ಉದ್ಯಮವು ಬ್ರೋಕರ್‌ಗಳು ಮತ್ತು ನಿರ್ವಾಹಕರಿಂದ ತುಂಬಿದೆ ಅನ್ನೋದು ಗೊತ್ತಾಗುತ್ತಿದ್ದಂತೆ ಅದನ್ನು ಬದಲಾಯಿಸಬೇಕೆಂದು ಕನಿಕಾ ಹಠತೊಟ್ಟಿದ್ದರು.

ಖಾಸಗಿ ಜೆಟ್ ಅನ್ನು ಬಳಸಲು ಬಯಸುವ ಬ್ರೋಕರ್ ಅಥವಾ ಖಾಸಗಿ ಆಪರೇಟರ್ ಅನ್ನು ಸಂಪರ್ಕಿಸಬೇಕು. ಅವರು ಜೆಟ್‌ಗಳು ಅಥವಾ ಹೆಲಿಕಾಪ್ಟರ್‌ಗಳನ್ನು ಶಿಫಾರಸು ಮಾಡುತ್ತಾರೆ. ಅದು ಗ್ರಾಹಕರ ಅವಶ್ಯಕತೆ ಲೆಕ್ಕಿಸದೆ ಹಣ ಪೀಕುತ್ತದೆ. ಇದಕ್ಕೆ ಕಾರಣ ಪಾರದರ್ಶಕತೆಯ ಕೊರತೆ ಮತ್ತು ಚಾರ್ಟರ್ ಪ್ಲೇನ್‌ಗಳ ಅಲಭ್ಯತೆ ಅನ್ನೋದನ್ನು ಅರ್ಥ ಮಾಡಿಕೊಂಡು ಕನಿಕಾ ಗೆಟ್‌ಸೆಟ್‌ಗೋಗೆ ಅಡಿಪಾಯ ಹಾಕಿದ್ದರು.

‘SMART’ ನಿರ್ವಹಣಾ ತಂತ್ರ, ನಿರ್ವಹಣೆ, ಮುನ್ಸೂಚನೆ ತಂತ್ರಜ್ಞಾನಗಳೊಂದಿಗೆ ಆರಂಭವಾದ ಈ ಸ್ಟಾರ್ಟ್‌ಅಪ್ ಹಿಂದೆಂದೂ ಇಲ್ಲದ ಸುರಕ್ಷತೆ ಮತ್ತು ಸಮಯಕ್ಕೆ ಆದ್ಯತೆ ನೀಡುತ್ತದೆ. ಭಾರತೀಯರಿಗೆ ಚಾರ್ಟರ್ಡ್ ವಿಮಾನ ಪ್ರಯಾಣ ಭವಿಷ್ಯದ ಸಾರಿಗೆಯಾಗಬೇಕು ಎಂಬುದು ಇವರ ಕನಸು. ನಾನು ವಿಮಾನ ಪ್ರಯಾಣವನ್ನು ಪ್ರಜಾಪ್ರಭುತ್ವಗೊಳಿಸಲು ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಾರೆ ಈ ಸಾಹಸಿ ಮಹಿಳೆ.

ಕನಿಕಾ M.B.A. ಪದವೀಧರೆ. ತಮ್ಮ ಸ್ನೇಹಿತ ಸುಧೀರ್ ಪೆರ್ಲ ಅವರೊಂದಿಗೆ ಕಂಪನಿಯನ್ನು ಹುಟ್ಟುಹಾಕಿದ್ರು. ಸಾಂಪ್ರದಾಯಿಕ ಮಾರ್ವಾಡಿ ಕುಟುಂಬದಲ್ಲಿ ಜನಿಸಿದವರು ಈಕೆ. ತಂದೆ ರಿಯಲ್ ಎಸ್ಟೇಟ್ ಮತ್ತು ಕೆಮಿಕಲ್‌  ವ್ಯವಹಾರವನ್ನು ನಡೆಸುತ್ತಿದ್ದರು. ಕನಿಕಾ ದಕ್ಷಿಣ ಭಾರತದಲ್ಲಿ ಬೋರ್ಡಿಂಗ್ ಸ್ಕೂಲ್ ಶಿಕ್ಷಣವನ್ನು ಪಡೆದರು. ನಂತರ ಅರ್ಥಶಾಸ್ತ್ರದಲ್ಲಿ ಪದವಿ ಮತ್ತು ವಿನ್ಯಾಸದಲ್ಲಿ ಡಿಪ್ಲೊಮಾಕ್ಕಾಗಿ ಮುಂಬೈಗೆ ತೆರಳಿದರು. ಸದ್ಯ 10 ಖಾಸಗಿ ಜೆಟ್‌ಗಳಿಗೆ ಒಡತಿಯಾಗಿರೋ ಕನಿಕಾ, ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...