ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳ 26 ರಂದು ಆಕಾಶವಾಣಿಯಲ್ಲಿ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ದೇಶ ಮತ್ತು ವಿದೇಶದ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ.
ಇದು ಮಾಸಿಕ ರೇಡಿಯೋ ಕಾರ್ಯಕ್ರಮದ 90 ನೇ ಸಂಚಿಕೆಯಾಗಿದೆ. ಈ ತಿಂಗಳ ‘ಮನ್ ಕಿ ಬಾತ್’ಗಾಗಿ ಹಲವಾರು ಇನ್ ಪುಟ್ ಗಳನ್ನು ಸ್ವೀಕರಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ ಎಂದು ಮೋದಿ ಟ್ವೀಟ್ ನಲ್ಲಿ ಹೇಳಿದ್ದಾರೆ. ಜನರು ತಮ್ಮ ಆಲೋಚನೆಗಳನ್ನು MyGov ಅಥವಾ NaMo ಅಪ್ಲಿಕೇಶನ್ ನಲ್ಲಿ ತಿಳಿಸುವಂತೆ ಹೇಳಿದ್ದಾರೆ.
ಮುಂದಿನ ‘ಮನ್ ಕಿ ಬಾತ್’ ಸಂಚಿಕೆಯಲ್ಲಿ ಪ್ರಧಾನಿ ಮಾತನಾಡಲು ಬಯಸುವ ವಿಷಯಗಳು ಅಥವಾ ಸಮಸ್ಯೆಗಳ ಕುರಿತು ಜನರು ತಮ್ಮ ಸಲಹೆಗಳನ್ನು ಕಳುಹಿಸಬಹುದು. ಟೋಲ್-ಫ್ರೀ ಸಂಖ್ಯೆ 1800-11-7800 ಡಯಲ್ ಮಾಡಬಹುದು.
ತಮ್ಮ ಸಂದೇಶವನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ರೆಕಾರ್ಡ್ ಮಾಡಿ ಕಳಿಸಬಹುದು. ರೆಕಾರ್ಡ್ ಮಾಡಿದ ಕೆಲವು ಸಂದೇಶಗಳು ಪ್ರಸಾರದ ಭಾಗವಾಗಬಹುದು. ಜನರು 1922 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು. ನಿಮ್ಮ ಸಲಹೆಗಳನ್ನು ನೇರವಾಗಿ ಪ್ರಧಾನ ಮಂತ್ರಿಗೆ ನೀಡಲು SMS ನಲ್ಲಿ ಸ್ವೀಕರಿಸಿದ ಲಿಂಕ್ ಅನುಸರಿಸಬಹುದು.