ಪೆಟ್ರೋಲ್ ಗಾಗಿ ಕಾದುನಿಂತ ಜನರಿಗೆ ಚಹಾ ವಿತರಿಸಿದ ಮಾಜಿ ಕ್ರಿಕೆಟಿಗ 20-06-2022 8:55AM IST / No Comments / Posted In: Latest News, Live News, International ಶ್ರೀಲಂಕಾವು ಆಹಾರ, ಇಂಧನ, ಔಷಧಿಗಳ ತೀವ್ರ ಕೊರತೆ ಎದುರಿಸುತ್ತಿದೆ. ಜನ ಪ್ರತಿದಿನವೂ ಪರದಾಡುತ್ತಿದ್ದಾರೆ. ಪೆಟ್ರೋಲ್ ಕೊರತೆ ಗಂಭೀರವಾಗಿದ್ದು, ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಮಾಜಿ ಕ್ರಿಕೆಟಿಗ ರೋಷನ್ ಮಹಾನಾಮ ಅವರು ಕೊಲಂಬೊದ ಪೆಟ್ರೋಲ್ ಬಂಕ್ನಲ್ಲಿ ಸರತಿ ಸಾಲಿನಲ್ಲಿ ಕಾಯುತ್ತಿರುವವರಿಗೆ ಚಹಾ ಮತ್ತು ಬನ್ ವಿತರಿಸಿದ್ದು, ಅದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಪೆಟ್ರೋಲ್ ಸರತಿಯಲ್ಲಿದ್ದ ಜನರಿಗೆ ನಾವು ಸಮುದಾಯ ಊಟದ ತಂಡದೊಂದಿಗೆ ಟೀ ಮತ್ತು ಬನ್ಗಳನ್ನು ಸಂಜೆ ವಿತರಿಸಿದೆವು. ಸರತಿ ಸಾಲು ದಿನದಿಂದ ದಿನಕ್ಕೆ ಉದ್ದವಾಗುತ್ತಿವೆ ಮತ್ತು ಸರತಿಯಲ್ಲಿ ಉಳಿಯುವ ಜನರಿಗೆ ಅನೇಕ ಆರೋಗ್ಯ ಅಪಾಯಗಳಿವೆ ಎಂದು ಕ್ರಿಕೆಟಿಗ ಮಹಾನಾಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೆಟ್ರೋಲ್ ಬಂಕ್ಗೆ ಭದ್ರತೆಗಾಗಿ ಸಶಸ್ತ್ರ ಪೋಲೀಸ್ ಮತ್ತು ಪಡೆಗಳನ್ನು ನಿಯೋಜಿಸಿದೆ. ಖಾಲಿಯಾಗುತ್ತಿರುವ ಇಂಧನ ದಾಸ್ತಾನು ಸಂರಕ್ಷಿಸುವ ಪ್ರಯತ್ನದಲ್ಲಿ ಸರ್ಕಾರವು ಎರಡು ವಾರ ರಾಜ್ಯ ಸಂಸ್ಥೆ ಮತ್ತು ಶಾಲೆಗಳನ್ನು ಸ್ಥಗಿತಗೊಳಿಸಿದೆ. ಇಂಧನಕ್ಕಾಗಿ ಸರತಿ ಸಾಲಿನಲ್ಲಿ ಒಬ್ಬರನ್ನೊಬ್ಬರು ನೋಡಿಕೊಳ್ಳಿ. ಸಾಕಷ್ಟು ನೀರು ಮತ್ತು ಆಹಾರವನ್ನು ತನ್ನಿ. ನಿಮಗೆ ಆರೋಗ್ಯವಿಲ್ಲದಿದ್ದರೆ ದಯವಿಟ್ಟು ಪಕ್ಕದಲ್ಲಿರುವರನ್ನು ಸಂಪರ್ಕಿಸಿ ಅಥವಾ 1990ಕ್ಕೆ ಕರೆ ಮಾಡಿ. ನಾವು ಒಬ್ಬರನ್ನೊಬ್ಬರು ನೋಡಿಕೊಳ್ಳಬೇಕು ಈ ಕಷ್ಟದ ಸಮಯದಲ್ಲಿ ಎಂದು ತಿಳಿಸಲಾಗಿದೆ. We served tea and buns with the team from Community Meal Share this evening for the people at the petrol queues around Ward Place and Wijerama mawatha. The queues are getting longer by the day and there will be many health risks to people staying in queues. pic.twitter.com/i0sdr2xptI — Roshan Mahanama (@Rosh_Maha) June 18, 2022