ಭಾರತದ ವಿರುದ್ಧ ಹಗೆತನ ಸಾರುವುದರಲ್ಲಿ ಚೀನಾ ನಂಬರ್1 ಅನ್ನೊದ್ರಲ್ಲಿ ದೂಸರಾ ಮಾತೇ ಇಲ್ಲ. ಈ ಸತ್ಯ ಗೊತ್ತಿದ್ದರೂ ಭಾರತದೊಳಗೆಯೇ ಇದ್ದು, ಚೀನಾಗೆ ಸಹಾಯ ಮಾಡುತ್ತಿದ್ದ ಕೆಲ ದೇಶದ್ರೋಹಿ ಕಂಪನಿಗಳ ವಿರುದ್ಧ ಕ್ರಮಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ.
ಒಬ್ಬರಲ್ಲ ಇಬ್ಬರಲ್ಲ 400 ಚಾರ್ಟಡ್ ಅಕೌಂಟೆಟ್ಸ್, ಮತ್ತು ಕಂಪನಿಯ ಕಾರ್ಯದರ್ಶಿಗಳನ್ನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಈಗಾಗಲೇ ಮೆಟ್ರೋ ನಗರಗಳಲ್ಲಿ ಜಾರಿಯಲ್ಲಿರುವ ನಿಯಮಗಳನ್ನ ಉಲ್ಲಂಘಿಸಿ ಚೀನಾದ ಶೆಲ್ ಕಂಪನಿಗಳೊಂದಿಗೆ, ಭಾರತದಲ್ಲಿರುವ ಅನೇಕ ಕಂಪನಿಗಳು ಕಾಂಟ್ಯಾಕ್ಟ್ನಲ್ಲಿದೆ. ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸುದ್ದಿಯ ಪ್ರಕಾರ ಸರ್ಕಾರ 2020ರಲ್ಲಿ ಗಲ್ವಾನ್ ಗಡಿಯಲ್ಲಿ ಚೀನಾ ಕ್ಯಾತೆ ತೆಗೆದು ಯುದ್ಧ ಮಾಡಿದ ನಂತರ ಚೀನಾ ಕಂಪನಿಗಳ ವಿರುದ್ಧ ಭಾರತ ಸರ್ಕಾರ ಕೆಲವು ಕಟ್ಟುನಿಟ್ಟಿನ ಕ್ರಮವನ್ನ ಕೈಗೊಂಡಿದೆ.
ಗಲ್ವಾನ್ನಲ್ಲಿ ಚೀನಾ ಪೀಪಲ್ಸ್ ಲೀಬರೆಷನ್ ಆರ್ಮಿ (PLA) ಗಲಾಟೆ ಮಾಡಿ 20 ಭಾರತೀಯ ಸೈನಿಕರನ್ನ ಬರ್ಬರವಾಗಿ ಹತ್ಯೆ ಮಾಡಿತ್ತು. ಅದಕ್ಕೆ ಪ್ರತಿಕಾರವಾಗಿ ಭಾರತ, ಚೀನಾ ಜೊತೆ ಯಾವುದೇ ಕಾರಣಕ್ಕೂ ವ್ಯಾಪಾರ ವಹಿವಾಟುಗಳನ್ನ ಇಟ್ಟುಕೊಳ್ಳಬಾರದು ಅನ್ನೊ ನಿರ್ಧಾರ ಮಾಡಿತ್ತು. ಸರ್ಕಾರದ ಈ ನಿರ್ಧಾರವನ್ನ ಮುರಿಯಲಾಗಿದೆ ಅನ್ನೊ ಆರೋಪವಿದೆ.
ಸಿಎ(Chartered Accountants) ಮತ್ತು ಸಿಎಎಸ್ (Chinese Shell Companies) ವಿರುದ್ಧ ಈಗಾಗಲೇ ತನಿಖೆ ಆರಂಭವಾಗಿದೆ. ಕೇಂದ್ರ ಸರ್ಕಾರ ಹಾಕಿರುವ ನಿಯಮ ಹಾಗೂ ಕಾನೂನನ್ನ ಉಲ್ಲಂಘಿಸಿ ಚೀನಾದ ಅಸ್ತಿತ್ವ ಹೊಂದಿರುವ ಹಾಗೂ ಚೀನಾ ಮೂಲದ ಶೆಲ್ ಕಂಪನಿಗಳಿಗೆ ಸಹಾಯ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೆಲ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (MCA) ಕಳೆದ ಎರಡು ತಿಂಗಳಲ್ಲಿ ಹಣಕಾಸು ಗುಪ್ತಚರ ಸಂಸ್ಥೆಯಿಂದ ಇನ್ನೂ ಕೆಲ ಮಾಹಿತಿ ಸಂಗ್ರಹಿಸಿ ನಂತರ ಕ್ರಮ ಕೈಗೊಳ್ಳುವುದಕ್ಕೆ ಶಿಫಾರಸ್ಸು ಮಾಡಿದೆ. ಹೀಗಂತ ಓರ್ವ ಸರ್ಕಾರಿ ಅಧಿಕಾರಿ ಮಾಧ್ಯಮಗಳಿಗೆ ಹೇಳಿದ್ದಾರೆ. ಆದರೆ ಈ ಕುರಿತು ಸಚಿವಾಲಯದ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ಸಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ದೇಶದಲ್ಲಿ ಚಾರ್ಟೆರ್ಡ್ ಅಕೌಂಟೆನ್ಸಿಯ ವೃತ್ತಿಯನ್ನು ನಿಯಂತ್ರಿಸುವ ಶಾಸನ ಬದ್ಧ, ಸಂಸ್ಥೆಯಾಗಿದೆ. ಐಸಿಎಐ ಪರವಾಗಿ, ಶಿಸ್ತಿನ ನಿರ್ದೇಶನಾಲಯವು ದೇಶದ ವಿವಿಧ ರಿಜಿಸ್ಟಾರ್ ಕಚೇರಿಗಳಿಂದ ಚೀನಾದ ಕಂಪನಿಗಳೊಂದಿಗೆ ಚಾರ್ಟರ್ಡ್ ಅಕೌಂಟೆಂಟ್ಗಳು ಸಹಯೋಗದ ವರದಿಗಳನ್ನ ಈಗಾಗಲೇ ಪಡೆದಿದೆ. ಈ ದೂರುಗಳ ಆಧಾರದ ಮೇಲೆ (ವೃತ್ತಿಪರ ಮತ್ತು ಇತರ ದುರ್ನಡತೆ ಮತ್ತು ಪ್ರಕರಣಗಳ ವಿಚಾರಣೆಯ ಕಾರ್ಯ ವಿಧಾನ) ನಿಯಮಗಳು 2007 ವಿವರವಾದ ತನಿಖೆಯ ನಂತರ ಎಲ್ಲವೂ ತಿಳಿಯುತ್ತದೆ, ಈ ಬಗ್ಗೆ ಪ್ರತಿಕ್ರಿಯಿಸಲು ಇನ್ನೂ ಸೂಕ್ತ ಸಮಯ ಬಂದಿಲ್ಲ ಅನ್ನುತ್ತಿದ್ದಾರೆ ಅಧಿಕಾರಿಗಳು.
(ICSI) ಅಂದರೆ ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ. ಇದು ಕೂಡಾ ಇನ್ನೂ ಈ ಪ್ರಕರಣದ ಬಗ್ಗೆ ಸ್ಪಷ್ಟನೆಯನ್ನ ನೀಡಿಲ್ಲ. ತೆರಿಗೆ ವಂಚನೆ ಮತ್ತು ಇತರ ಪ್ರಕರಣಗಳಲ್ಲಿ ಕಳೆದ ಅಕ್ಟೋಬರ್ನಿಮದ ಟೆಲಿಕಾಂ, ಫಿನ್ಟೆಕ್ ಮತ್ತು ಉತ್ಪಾದನೆಯಲ್ಲಿ ತೊಡಗಿರುವ ಸುಮಾರು ಅರ್ಧ ಡಜನ್ ಚೀನೀ ಕಂಪನಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು. ಈಗಾಗಲೇ ಇದರ ಬಗ್ಗೆ ಕೂಲಂಕುಶವಾಗಿ ತನಿಖೆ ಮಾಡಲಾಗುತ್ತಿದೆ.