ಹಾರುತ್ತಿದ್ದ ವಿಮಾನದಲ್ಲೇ ಪ್ರಯಾಣಿಕ ಅಸ್ವಸ್ಥ; ಕೂಡಲೇ ನೆರವಿಗೆ ಧಾವಿಸಿದ ಕೇಂದ್ರ ಸಚಿವ – ಬಿಜೆಪಿ ಸಂಸದ 19-06-2022 7:39AM IST / No Comments / Posted In: Latest News, India, Live News ವೈದ್ಯರೂ ಆಗಿರುವ ಕೇಂದ್ರ ಸಚಿವ ಬಿ.ಕೆ. ಕರಾಡ್, ಇತ್ತೀಚೆಗೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಛಾಯಾಗ್ರಾಹಕ ಕುಸಿದುಬಿದ್ದಿದ್ದು, ಕೂಡಲೇ ಆತನ ನೆರವಿಗೆ ಧಾವಿಸಿದ್ದರು. ಇದೀಗ ಇಂತಹುದೇ ಮತ್ತೊಂದು ಘಟನೆ ನಡೆದಿದೆ. ದೆಹಲಿ – ಔರಂಗಾಬಾದ್ ನಡುವೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಹಠಾತ್ ಅಸ್ವಸ್ಥಗೊಂಡಿದ್ದು, ನಿಯಮಾವಳಿಗಳಂತೆ ವಿಮಾನ ಸಿಬ್ಬಂದಿ, ವಿಮಾನದಲ್ಲಿ ಯಾರಾದರೂ ವೈದ್ಯರು ಇದ್ದರೆ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದಾರೆ. ಇದೇ ವಿಮಾನದಲ್ಲಿ ಕೇಂದ್ರ ಸಚಿವ ಬಿ.ಕೆ. ಕರಾಡ್ ಹಾಗೂ ಬಿಜೆಪಿ ಸಂಸದ ಡಾ. ಸುಭಾಷ್ ಭಾಮ್ರೆ ಪ್ರಯಾಣಿಸುತ್ತಿದ್ದು ಕೂಡಲೇ ಅಸ್ವಸ್ಥಗೊಂಡ ಪ್ರಯಾಣಿಕನ ಚಿಕಿತ್ಸೆಗೆ ಧಾವಿಸಿದ್ದಾರೆ. ಈ ವಿಷಯವನ್ನು ಏರ್ ಇಂಡಿಯಾ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. #FlyAI : A passenger onboard our Delhi-Aurangabad flt yesterday fell ill. As per SOP the crew announced to check if any doctor was on board. We would like to thank Dr B.K. Karad(Mos Finance) & Dr. Subhash Bhamre who immediately attended to him. pic.twitter.com/kmN8CMGYDL — Air India (@airindia) June 17, 2022