ನೇರವಾದ ತಲೆಕೂದಲನ್ನು ಪಡೆಯುವುದಕ್ಕಾಗಿ ಅನೇಕರು ಬ್ಯೂಟಿ ಪಾರ್ಲರ್ ಗಳ ಮೊರೆಹೋಗುತ್ತಾರೆ. ಸಾವಿರಾರು ರೂಪಾಯಿಗಳನ್ನು ವ್ಯಯಿಸಿ ಕೂದಲ ಸ್ಟ್ರೇಟನಿಂಗ್ ಮಾಡಿಸಿಕೊಳ್ಳುತ್ತಾರೆ.
ಪಾರ್ಲರ್ ಗಳಲ್ಲಿ ಬಳಸುವ ಕೆಮಿಕಲ್ಸ್ ಗಳಿಂದ ಕೂದಲನ್ನು ನೇರವಾಗಿಸಿಕೊಂಡರೆ ಕೂದಲ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಇಂತಹ ಕೆಮಿಕಲ್ ಬಳಸುವುದರ ಬದಲಾಗಿ ಮನೆಯಲ್ಲೇ ಕೂದಲ ಸ್ಟ್ರೇಟನಿಂಗ್ ಮಾಡಿಕೊಳ್ಳಬಹುದು. ಅಂತಹ ಒಂದು ವಿಧಾನ ಇಲ್ಲಿದೆ.
ಚೆನ್ನಾಗಿ ಕಳಿತ 2 ಬಾಳೆಹಣ್ಣನ್ನು ಸ್ವಲ್ಪವೂ ಗಂಟುಗಳಿಲ್ಲದಂತೆ ನಾದಿಕೊಳ್ಳಬೇಕು. ನಂತರ ಅದಕ್ಕೆ ಮೊಸರು ಮತ್ತು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಕಬೇಕು. ಎಲ್ಲ ಮಿಶ್ರಣಗಳೂ ಸರಿಯಾಗಿ ಬೆರೆತ ನಂತರ ಅದನ್ನು ಕೂದಲಿಗೆ ಹಚ್ಚಬೇಕು.
ಬಾಳೆಹಣ್ಣಿನ ಮಿಶ್ರಣವನ್ನು ಕೂದಲಿಗೆ ಹಚ್ಚಿದ ನಂತರ ಸುಮಾರು 1 ಗಂಟೆಗಳ ತನಕ ಅದನ್ನು ಹಾಗೆ ಬಿಡಿ. ನಂತರ ಶಾಂಪೂವಿನಿಂದ ಕೂದಲನ್ನು ತೊಳೆಯಬಹುದು. ಹೀಗೆ ಮಾಡುವುದರಿಂದ ಕೂದಲು ನೇರವಾಗುತ್ತದೆ ಮತ್ತು ಹೊಳಪನ್ನು ಪಡೆಯುತ್ತದೆ. ಇದರಿಂದ ಕೂದಲಿಗೆ ಯಾವುದೇ ರೀತಿಯ ಹಾನಿ ಕೂಡ ಉಂಟಾಗುವುದಿಲ್ಲ.