ಪ್ರಪಂಚದಾದ್ಯಂತದ ಮಹಿಳೆಯರಿಗೆ ಸಂಬಂಧಿಸಿದ ಅನೇಕ ವಿಷಯಗಳಿವೆ. ಅದು ಪುರುಷರಿಗೆ ತಿಳಿದಿಲ್ಲ. ತುಳಸಿದಾಸರನ್ನು ಹೊರತುಪಡಿಸಿ ಯಾರೂ ಸ್ತ್ರೀ ಬಗ್ಗೆ ಈ ವಿಷ್ಯವನ್ನು ಹೇಳಿಲ್ಲ. ತುಳಸಿದಾಸರು ಹೇಳಿದ ವಿಷ್ಯಗಳು ಇಲ್ಲಿವೆ.
ತುಳಸಿದಾಸರ ಪ್ರಕಾರ ಸಮಯ ಕೆಟ್ಟದು ಬಂದಾಗ ಸಹಿಷ್ಣುತೆ, ಸ್ನೇಹ, ಧರ್ಮ ಮತ್ತು ಮಹಿಳೆಯನ್ನು ಪರೀಕ್ಷಿಸಲಾಗುತ್ತದೆ. ಒಳ್ಳೆಯ ಸಮಯದಲ್ಲಿ ಅವರೆಲ್ಲರೂ ಬೆಂಬಲಿಸುತ್ತಾರೆ. ಆದರೆ ಕೆಟ್ಟ ಕಾಲದಲ್ಲಿ ಯಾರೂ ಬೆಂಬಲಿಸುವುದಿಲ್ಲ. ಆದ್ದರಿಂದ ಆ ಸಮಯದಲ್ಲಿ ಮಹಿಳೆಯನ್ನು ಸಹ ಪರೀಕ್ಷಿಸಲಾಗುತ್ತದೆ.
ತುಳಸಿದಾಸರ ಪ್ರಕಾರ ಪತ್ನಿಯನ್ನು ಹೊರತುಪಡಿಸಿ ಬೇರೆ ಹೆಣ್ಣು ಮಕ್ಕಳನ್ನು ತಾಯಿ-ತಂಗಿಯಂತೆ ನೋಡುವ ಪುರುಷನ ಹೃದಯದಲ್ಲಿ ಸದಾ ಈಶ್ವರ ನೆಲೆಸಿರುತ್ತಾನಂತೆ. ಅಂದ್ರೆ ಮಹಿಳೆಯರನ್ನು ಗೌರವಿಸುವುದು ಅತಿ ಮುಖ್ಯ.
ಸೌಂದರ್ಯ ನೋಡಿದ ನಂತ್ರ ಬುದ್ಧಿವಂತ ವ್ಯಕ್ತಿಯೂ ಮೂರ್ಖನಾಗ್ತಾನೆ ಎಂದು ತುಳಸಿದಾಸ ಹೇಳಿದ್ದಾರೆ. ಸೌಂದರ್ಯದ ಹಿಂದೆ ಎಂದೂ ಓಡಬಾರದು. ನವಿಲು ಕೂಡ ಸುಂದರವಾಗಿರುತ್ತದೆ. ಆದ್ರೆ ಅದು ಕೂಡ ಹಾವನ್ನು ತಿನ್ನುತ್ತದೆ.