alex Certify ಭಾರತದಲ್ಲಿ PUBG ಬ್ಯಾನ್‌ ಆಗಿದ್ದರೂ ಇನ್ನೂ ಯಾಕೆ ಲಭ್ಯ..? ಮಕ್ಕಳ ರಕ್ಷಣಾ ಆಯೋಗದ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ PUBG ಬ್ಯಾನ್‌ ಆಗಿದ್ದರೂ ಇನ್ನೂ ಯಾಕೆ ಲಭ್ಯ..? ಮಕ್ಕಳ ರಕ್ಷಣಾ ಆಯೋಗದ ಪ್ರಶ್ನೆ

ಕೆಲವೇ ಕೆಲವು ವರ್ಷಗಳ ಹಿಂದಿನ ಮಾತು, PUBG ಗೇಮ್ ಆಟದ ಹುಚ್ಚು ಪ್ರತಿಯೊಬ್ಬರಿಗೂ ಹತ್ತಿತ್ತು. PUBG ಹುಚ್ಚಾಟಕ್ಕೆ ಅದೆಷ್ಟೋ ವಿದ್ಯಾರ್ಥಿಗಳ ಭವಿಷ್ಯವೇ ಬರ್ಬಾದ್ ಆಗಿ ಹೋಗಿತ್ತು. ಆ ಹುಚ್ಚು ಬಿಡಿಸಲೆಂದೇ ಸರ್ಕಾರ PUBG ಆಟವನ್ನ ಬ್ಯಾನ್ ಮಾಡಿತ್ತು. ಆದರೂ PUBG ಆಟ ಮಾತ್ರ ಇನ್ನುವರೆಗೂ ಮೊಬೈಲ್ಗಳಲ್ಲಿ ಲಭ್ಯವಾಗುತ್ತಿದೆ.

ಈಗ ಇದನ್ನೇ ಮಕ್ಕಳ ರಕ್ಷಣಾ ಆಯೋಗ ಪ್ರಶ್ನೆ ಮಾಡಿದೆ. PUBG ಆನ್ಲೈನ್ ವಿಡಿಯೋ ಗೇಮ್ ಭಾರತದಲ್ಲಿ ಏಕೆ ಲಭ್ಯ ಇದಕ್ಕೆ ಕಾರಣ ಕೊಡಿ ಅಂತ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು ಕೇಂದ್ರ ಸರ್ಕಾರದ ಹಿರಿಯ ಅಧಿಕಾಗಳನ್ನ ಕೇಳಿದೆ.

ಕೇಂದ್ರ ಸರ್ಕಾರವು PUBG ಮೊಬೈಲ್ ಮತ್ತು ಅದರ ಆವೃತ್ತಿ PUBG ಲೈಟ್ ಸೇರಿದಂತೆ 118 ಚೀನೀ ಅಪ್ಲಿಕೇಶನ್‌ಗಳನ್ನು ಸೆಪ್ಟೆಂಬರ್ 2, 2020ರಂದು ನಿಷೇಧಿಸಿತ್ತು. ಈ ಅಪ್ಲಿಕೇಶನ್‌ಗಳು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸುರಕ್ಷತೆಗೆ ಕಂಟಕ“ ಎಂದು ಸರ್ಕಾರ ಆಗ ಹೇಳಿತ್ತು.

ಅಕ್ಟೋಬರ್ 30,2020 ರಂದು PUBG ತನ್ನ ಮೊಬೈಲ್ ಆವೃತ್ತಿಯನ್ನು ಇನ್ನು ಮುಂದೆ ಭಾರತದಲ್ಲಿನ ಬಳಕೆದಾರರಿಗೆ ಲಭ್ಯವಾಗುವುದಿಲ್ಲ ಎಂದು ಹೇಳಿತ್ತು. ಆದರೂ ಪಬ್‌ಜಿ ಮೊಬೈಲ್ ಗೇಮ್ ಭಾರತದಲ್ಲಿ ಲಭ್ಯವಾಗುತ್ತಿದೆ.

ಮಕ್ಕಳ ಹಕ್ಕುಗಳ ಸಂಸ್ಥೆಯ ಮುಖ್ಯಸ್ಥ ಪ್ರಿಯಾಂಕ್‌ ಕಾನೂಂಗೊ ಅವರು ತಮ್ಮ ಪತ್ರದಲ್ಲಿ, ಲಕ್ನೋದಲ್ಲಿ 16 ವರ್ಷದ ಬಾಲಕ ತನ್ನ ತಾಯಿ PUBG ಆಡಲು ಬಿಡಲಿಲ್ಲ ಅನ್ನುವ ಕಾರಣಕ್ಕೆ ಗುಂಡಿಕ್ಕಿ ಕೊಂದ ಹಾಕಿದ್ದ ಘಟನೆಯನ್ನ ಪ್ರಸ್ತಾಪಿಸಿ, PUBGಯನ್ನು ದೇಶದಲ್ಲಿ ಕಾನೂನುಬದ್ಧವಾಗಿ ನಿರ್ಬಂಧಿಸಿದ್ದರೂ ಆಟ ಏಕೆ ಲಭ್ಯವಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಜಯ್ ಪ್ರಕಾಶ್ ಸಾಹ್ನಿ ಅವರನ್ನು ಪ್ರಿಯಾಂಕ್ ಕೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...