ಕೆಲವು ತಿಂಗಳುಗಳಿಂದ ತೀವ್ರ ಇಳಿಮುಖಗೊಂಡಿದ್ದ ಕೊರನಾ ಸೋಂಕಿನ ಪ್ರಕರಣ ಈಗ ಮತ್ತೆ ಏರಿಕೆಯತ್ತ ಸಾಗಿದೆ. ದೇಶ ಹಾಗೂ ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಹೀಗಾಗಿ ನಾಲ್ಕನೇ ಅಲೆ ಭೀತಿ ಎದುರಾಗಿದೆ.
ಎರಡನೇ ಅಲೆ ಚಿಕ್ಕ ವಯಸ್ಸಿನವರನ್ನೇ ಹೆಚ್ಚು ಬಲಿ ಪಡೆದಿದ್ದು, ಮೂರನೇ ಅಲೆ ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ. 4ನೇ ಅಲೆಯೂ ಸಹ ದುರ್ಬಲವಾಗಿರಲಿದೆ ಎನ್ನಲಾಗಿದ್ದು, ಆದರೆ ಈ ಕುರಿತು ಇನ್ನೂ ಯಾವುದೇ ಸ್ಪಷ್ಟತೆಯಿಲ್ಲ.
ಕೊರೊನಾ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮತ್ತೆ ಕಠಿಣ ನಿಯಮ ಜಾರಿಗೊಳಿಸಲಿವೆ ಎನ್ನಲಾಗುತ್ತಿದ್ದು, ಕಡ್ಡಾಯ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುವುದರ ಮೇಲೆ ನಿರ್ಬಂಧ ಹೇರುವ ಸಾಧ್ಯತೆ ಇದೆ.