ತಾನು ಜಮೀನಿನಲ್ಲಿ ಬೆಳೆದಿದ್ದ ಸೋಯಾಬಿನ್, ಅಕಾಲಿಕ ಮಳೆಯ ಕಾರಣಕ್ಕೆ ಉತ್ತಮ ಇಳುವರಿ ನೀಡದ ಕಾರಣ ಆದಾಯದಲ್ಲಿ ಕುಸಿತ ಕಂಡ ರೈತರೊಬ್ಬರು ಇದೀಗ ಜೀವನ ನಿರ್ವಹಣೆಗೆ ಹೆಲಿಕಾಪ್ಟರ್ ಖರೀದಿಸಲು ಮುಂದಾಗಿದ್ದಾರೆ.
ಹೌದು, ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಹಿಂಗೋಲಿ ತಕ್ತೋಡಾ ಗ್ರಾಮದ 22 ವರ್ಷದ ರೈತ ಯುವಕ ಕೈಲಾಸ್ ಪತಂಗೆ ಈ ಒಂದು ತೀರ್ಮಾನಕ್ಕೆ ಬಂದಿದ್ದು, ನನಗಾದ ನಷ್ಟಕ್ಕೆ ಬಂದ ಬೆಳೆ ವಿಮೆಯೂ ಸಾಕಾಗಲಿಲ್ಲ ಎಂದಿದ್ದಾರೆ.
ಹೀಗಾಗಿ ಕೃಷಿಯಿಂದ ಯಾವುದೇ ಆದಾಯ ಇಲ್ಲವೆಂಬ ತೀರ್ಮಾನಕ್ಕೆ ಬಂದಿರುವ ಅವರು, ಬ್ಯಾಂಕ್ ಸಾಲ ಪಡೆದು ಹೆಲಿಕಾಪ್ಟರ್ ಖರೀದಿಸಿದ ಬಳಿಕ ಅದನ್ನು ಬಾಡಿಗೆಗೆ ನೀಡಿ ನೆಮ್ಮದಿಯ ಜೀವನ ನಡೆಸಲು ನಿಶ್ಚಯಿಸಿದ್ದಾರೆ.
ಈಗ ಹೆಲಿಕಾಪ್ಟರ್ ಖರೀದಿಸಲು ಅವರು ಗೋರೆಗಾಂವ್ ಬ್ಯಾಂಕಿಗೆ ತೆರಳಿ 6.6 ಕೋಟಿ ರೂಪಾಯಿ ಸಾಲ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಬ್ಯಾಂಕ್ ಅವರ ಅರ್ಜಿಗೆ ಯಾವ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.