ಬೆಂಗಳೂರು: ಜೈಲಿನಲ್ಲಿದ್ದ ಮಗನಿಗೆ ಊಟ, ಬಟ್ಟೆ ಕೊಡಲು ಬಂದಿದ್ದ ತಾಯಿ ಜೈಲುಪಾಲಾಗಿದ್ದಾರೆ. ಆಕೆ ಮಗನಿಗೆ ಬಟ್ಟೆ ಕೊಡಲು ತಂದಿದ್ದ ಬ್ಯಾಗ್ ನಲ್ಲಿ 5 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ.
ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಮಹಿಳೆ ಪರ್ವೀನ್ ತಾಜ್ ಅವರನ್ನು ಬಂಧಿಸಿದ್ದಾರೆ. ಪರ್ವೀನ್ ತಾಜ್ ಬಳಿಯಿದ್ದ 5 ಲಕ್ಷ ರೂಪಾಯಿ ಮೌಲ್ಯದ ಹ್ಯಾಷ್ ಆಯಿಲ್ ಜಪ್ತಿ ಮಾಡಲಾಗಿದೆ. ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪುತ್ರ ಮೊಹಮದ್ ಬಿಲಾಲ್ ನನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದರು.
ಜೂನ್ 13 ರಂದು ಮಗನನ್ನು ಭೇಟಿಯಾಗಲು ಬಂದಿದ್ದ ಫರ್ವೀನ್ ಊಟದ ಕೊಡುವ ನೆಪದಲ್ಲಿ ಡ್ರಗ್ಸ್ ನೀಡಲು ಮುಂದಾಗಿದ್ದರು. ಪೊಲೀಸರ ಪರಿಶೀಲನೆ ವೇಳೆ ಡ್ರಕ್ಸ್ ಪತ್ತೆಯಾಗಿದ್ದು, ವಿಚಾರಣೆ ನಡೆಸಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.