ಟ್ರಾಫಿಕ್ ಪೊಲೀಸರು ಅಂದ್ರೆ ಸಾಕು, ರಸ್ತೆ ಮಧ್ಯದಲ್ಲಿ ನಿಂತು ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ಹಾಕುವವರು. ಇದೇ ನಮಗೆ ಮೊದಲು ನೆನಪಾಗೋದು. ಆದರೆ ಕೆಲವು ಟ್ರಾಫಿಕ್ ಪೊಲೀಸರು ಇದ್ದಾರೆ ನೋಡಿ ಅವರು ಅನೇಕರಿಗೆ ಮಾದರಿಯಾಗಿರುತ್ತಾರೆ.
ಅಂತಹ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುತ್ತೆ. ಅಂತಹ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗ್ತಿದೆ. ಈ ವಿಡಿಯೋವನ್ನ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಟ್ರಾಫಿಕ್ ಪೊಲೀಸ್ ಈ ಕೆಲಸಕ್ಕೆ ನನ್ನ ಕಡೆಯಿಂದ ಗೌರವ ವಂದನೆಗಳು, ಅಂತ ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತೆ ಬರ್ತಿದೆ ಪುಟಾಣಿಗಳ ನೆಚ್ಚಿನ ಶಕ್ತಿಮಾನ್, ಬಜೆಟ್ ಕೇಳಿದ್ರೆ ದಂಗಾಗಿ ಹೋಗ್ತೀರಾ…!
ಅದು ವಾಹನದಟ್ಟಣೆಯಿಂದ ಕೂಡಿದ ರಸ್ತೆ, ಆ ರಸ್ತೆಯಲ್ಲಿ ಕಲ್ಲಿನ ರಾಶಿ, ಮರಳು ಬಿದ್ದಿತ್ತು. ಅದರಿಂದ ವಾಹನಗಳಿಗೆ ತೊಂದರೆ, ಏನಾದರೂ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿತ್ತು. ಇದನ್ನ ಗಮನಿಸಿದ ಅಲ್ಲೇ ಡ್ಯೂಟಿಯಲ್ಲಿದ್ದ ಟ್ರಾಫಿಕ್ ಪೊಲೀಸ್, ತಾವೇ ಖುದ್ದಾಗಿ ಕಸಗುಡಿಸಿ ರಸ್ತೆಯನ್ನ ಸ್ವಚ್ಛಗೊಳಿಸಿದ್ದಾರೆ. ಈ ವಿಡಿಯೋ ನೋಡಿ ಎಲ್ಲರೂ ಟ್ರಾಫಿಕ್ ಪೊಲೀಸ್ ಮಾಡಿರುವ ಕೆಲಸಕ್ಕೆ ಹ್ಯಾಟ್ಸ್ಆಫ್ ಅಂತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಈ ವಿಡಿಯೋ 10 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಪೊಲೀಸ್ ಮಾಡಿರುವ ಈ ಕೆಲಸದಿಂದ ನಾವು ಕಲಿಯಬೇಕಾಗಿರೋದಂತು ತುಂಬಾ ಇದೆ ಅಂತ ಒಬ್ಬರು ಬರೆದುಕೊಂಡಿದ್ದಾರೆ, ಇನ್ನೊಬ್ಬರು, ಪೊಲೀಸಪ್ಪನಿಗೆ ನನ್ನ ಕಡೆಯಿಂದ ಹ್ಯಾಟ್ಸ್ ಆಫ್ ಅಂತ ಬರೆದಿದ್ದಾರೆ. ವೈರಲ್ ಆಗಿರೋ ಈ ವಿಡಿಯೋ ಅನೇಕರಿಗೆ ಮಾದರಿಯಾಗಿದ್ದಂತೂ ಸುಳ್ಳಲ್ಲ.