alex Certify ಕಡು ಬಡತನದಲ್ಲೂ ಛಲ ಬಿಡದೆ ಓದಿದಾಕೆಗೆ 11 ‘ಚಿನ್ನ’ ದ ಪದಕ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡು ಬಡತನದಲ್ಲೂ ಛಲ ಬಿಡದೆ ಓದಿದಾಕೆಗೆ 11 ‘ಚಿನ್ನ’ ದ ಪದಕ…!

ಆಕೆಯ ಪೋಷಕರು ಕೂಲಿ ಕಾರ್ಮಿಕರು. ಅವರಿಗಿದ್ದದ್ದು ಮುಕ್ಕಾಲು ಎಕರೆ ಜಮೀನು. ಇದರಿಂದ ಜೀವನ ನಿರ್ವಹಣೆ ಸಾಲದೆಂಬ ಕಾರಣಕ್ಕೆ ತಂದೆ – ತಾಯಿ ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಛಲ ಬಿಡದೆ ಓದಿದ ಆ ವಿದ್ಯಾರ್ಥಿನಿ ಈಗ ಸ್ನಾತಕೋತ್ತರ ಪದವಿಯಲ್ಲಿ 11 ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಹೌದು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಹಣಗೆರೆ ಕಟ್ಟೆ ಗ್ರಾಮದ ನಾಗರಾಜ್ – ಭವಾನಿ ದಂಪತಿ ಪುತ್ರಿ ದಿವ್ಯಾ ಇಂಥದೊಂದು ಸಾಧನೆ ಮಾಡಿದ ವಿದ್ಯಾರ್ಥಿನಿಯಾಗಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದ ಬಸವ ಸಭಾ ಭವನದಲ್ಲಿ ಗುರುವಾರ ನಡೆದ ಘಟಿಕೋತ್ಸವ ಸಂದರ್ಭದಲ್ಲಿ ಗಣ್ಯರಿಂದ ಚಿನ್ನದ ಪದಕ ಪಡೆದ ದಿವ್ಯಾರ ಕಣ್ಣು ಈ ಸಂದರ್ಭದಲ್ಲಿ ಸಾರ್ಥಕ ಭಾವದಿಂದ ತೇವಗೊಂಡಿವೆ.

ಎಂಎ ಕನ್ನಡ ವಿಭಾಗದಲ್ಲಿ ದಿವ್ಯಾರವರು 11 ಚಿನ್ನದ ಪದಕ ಪಡೆದಿದ್ದು, ಇದರ ಜೊತೆಗೆ ಎರಡು ನಗದು ಬಹುಮಾನಗಳನ್ನು ಸಹ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಬಿಸಿಎಂ ಹಾಸ್ಟೆಲ್ ನಲ್ಲಿ ಇದ್ದ ಕಾರಣ ತಂದೆ-ತಾಯಿಗೆ ಹೊರೆ ಕಡಿಮೆ ಆಯಿತು. ನಾನು ಸ್ನಾತಕೋತ್ತರ ಪಡೆಯಲು ತಂದೆ-ತಾಯಿ ಹಾಗೂ ಅಕ್ಕಂದಿರ ಒತ್ತಾಸೆಯೂ ಪ್ರೇರಣೆ ಎಂದು ಹೇಳಿದರು. ಮುಂದೆ ಪಿಎಸ್ಐ ಆಗುವ ಬಯಕೆ ಹೊಂದಿರುವ ದಿವ್ಯಾ ಅದಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...