ಬೆಂಗಳೂರು ಮೂಲದ ಐಟಿ ಪ್ರಮುಖ ಇನ್ಫೋಸಿಸ್ ಭಾರತದ ಎರಡನೇ ಹಂತದ ನಗರಗಳಲ್ಲಿ ನಾಲ್ಕು ಹೊಸ ಕಚೇರಿಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ. ಭವಿಷ್ಯದಲ್ಲಿ ವಿವಿಧ ಶ್ರೇಣಿ-II ನಗರಗಳಲ್ಲಿ ಟ್ಯಾಲೆಂಟ್ ಹಬ್ ಗಳಿಗೆ ಹೆಚ್ಚಿನ ಹೂಡಿಕೆ ಮುಂದುವರಿಸುವುದಾಗಿ ಸಂಸ್ಥೆಯು ಇತ್ತೀಚೆಗೆ ಘೋಷಿಸಿತು.
ಕಂಪನಿಯು ನೋಯ್ಡಾ, ಕೊಯಮತ್ತೂರು, ಕೋಲ್ಕತ್ತಾ ಮತ್ತು ವೈಜಾಗ್ ನಲ್ಲಿ ಹೊಸ ಕಚೇರಿಗಳನ್ನು ಸ್ಥಾಪಿಸಲಿದೆ. ಇನ್ಫೋಸಿಸ್ ತನ್ನ ಕಚೇರಿಗಳನ್ನು ಎರಡನೇ ಹಂತದ ನಗರಗಳಲ್ಲಿ ಸ್ಥಾಪಿಸಲಿದ್ದು, ಕಂಪನಿಯ ಕೇಂದ್ರಗಳು ನಾಗ್ಪುರ ಮತ್ತು ಇಂದೋರ್ ನಲ್ಲಿಯೂ ಇವೆ.
ನಮ್ಮಲ್ಲಿ ಹೆಚ್ಚಿನ ಸಂಖ್ಯೆಯ ಜನರು ಹುಟ್ಟೂರುಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮನೆಯ ಹತ್ತಿರ ಕೆಲಸ ಮಾಡಲು ಅವಕಾಶಗಳಿವೆ ಎಂದು ಖಚಿತಪಡಿಸಿಕೊಳ್ಳುತ್ತೇವೆ. ಇವು ಕನಿಷ್ಠ 1,000 ಆಸನಗಳನ್ನು ಹೊಂದಿದೆ. ಮುಂದೆ ಹೋದಂತೆ ಅವುಗಳನ್ನು ವಿಸ್ತರಿಸುತ್ತೇವೆ. ಮುಂದಿನ ತ್ರೈಮಾಸಿಕದಲ್ಲಿ, ಈ ಎಲ್ಲಾ ಕಚೇರಿಗಳು ಸಿದ್ಧವಾಗುತ್ತವೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಗುಂಪಿನ ಮುಖ್ಯಸ್ಥ ಕೃಷ್ಣಮೂರ್ತಿ ಶಂಕರ್ ತಿಳಿಸಿದ್ದಾರೆ.