ನಟ ಅಮೀರ್ ಮತ್ತು ನಟಿ ಕಾಜೋಲ್ ಒಬ್ಬರಿಗೊಬ್ಬರು ಸವಾಲು ಹಾಕುವ ಹಾಗೆ ನಟಿಸಿ ಎಲ್ಲರ ಹೃದಯವನ್ನ ಗೆದ್ದ ಸಿನೆಮಾ ಫನಾ. ಸೂಪರ್ ಡೂಪರ್ ಹಿಟ್ ಸಿನೆಮಾ ಹಾಡುಗಳು ಇಂದಿಗೂ ಎಲ್ಲರ ಕಿವಿಯಲ್ಲಿ ಗುನುಗುನಾಯಿಸ್ತಾ ಇದೆ. ಸಂಗೀತ, ಹಾಡು ಇವು ಇದೆಯಲ್ಲ, ಭಾಷೆ, ಗಡಿ, ಜಾತಿ, ಧರ್ಮ ಇದ್ಯಾವುದನ್ನೂ ನೋಡಲ್ಲ. ಒಮ್ಮೆ ಮನಸ್ಸಿನೊಳಗೆ ಹೊಕ್ಕರೆ ಸಾಕು ಅಲ್ಲೇ ಗಟ್ಟಿಯಾಗಿ ಬೇರೂರಿ ಬಿಡುತ್ತೆ. ಈಗ ಪಾಕಿಸ್ತಾನಿ ಯುವಕ ʼಫನಾʼ ಸಿನೆಮಾ ಹಾಡಿಗೆ ಫಿದಾ ಆಗಿರೋ ರೀತಿ ನೋಡ್ತಿದ್ರೆ ಅದು ನಿಜ ಅಂತ ಅನ್ನಿಸದೇ ಇರೋಲ್ಲ.
ಅದು ಗುಡ್ಡಗಾಡಿನ ಪ್ರದೇಶ. ಕಣ್ಣಾಡಿಸಿದ್ದಲ್ಲೆಲ್ಲ ಹಸಿರೋ ಹಸಿರು. ಅದರ ಮಧ್ಯದಲ್ಲಿ ಕುಳಿತ ಪಾಕಿಸ್ತಾನಿ ಯುವಕ, ಸಿಯಾಲ್ಖಾನ್ ಸುಮಧುರ ಸಂಗೀತ ನುಡಿಸುತ್ತಿದ್ದಾನೆ. ಅದು ಬಾಲಿವುಡ್ನ್ ಫನಾ ಸಿನೆಮಾ ಹಾಡು `ಮೇರೆ ಹಾಥ್ ಮೆ, ತೇರಾ ಹಾಥ್ ಹೋ` ಅನ್ನೊ ಹಾಡು. ಆತ ಆ ವಿಶೇಷ ಬಗೆಯ ಇನ್ಸ್ಟ್ರೂಮೆಂಟ್ ನುಡಿಸೋ ಪರಿ ನೋಡ್ತಿದ್ರೆ, ಎಂಥವರೂ ಕೂಡಾ ಫಿದಾ ಆಗುವ ಹಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಆತ ಇನ್ಸ್ಟ್ರಮೆಂಟ್ ನುಡಿಸೊ ಪರಿಗೆ ನೆಟ್ಟಿಗರು ಮಂತ್ರಮುಗ್ಧರಾಗಿ ಹೋಗಿದ್ದಾರೆ. ಇದು ಬಾಲಿವುಡ್ ಹಾಡಾದರೂ ಪಾಕಿಸ್ತಾನ್ ಯುವಕನ ಮನಸ್ಸಿನಿಂದ ನುಡಿಸಿದ ಈ ಸಂಗೀತ ಕೇಳಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
https://youtu.be/QOau2JfzIjg