ಮನೆಯಂಗಳದಲ್ಲೇ ಸಾಂಬ್ರಾಣಿ ಸೊಪ್ಪು ಬೆಳೆಯುವುದರಿಂದ ಮನೆಯ ಮಕ್ಕಳಿಗೆ ಶೀತವಾದಾಗ ತಕ್ಷಣ ರಸ ಹಿಂಡಿ ಕೊಟ್ಟು ಅನಾರೋಗ್ಯವನ್ನು ದೂರಮಾಡಬಹುದು ಎಂಬುದು ನಿಮಗೆಲ್ಲಾ ಗೊತ್ತಿದೆ.
ಅದರ ಹೊರತಾದ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ….?
ಮೈಯಲ್ಲಿ ಅಲರ್ಜಿಯಿಂದ ಉಂಟಾದ ಬೊಬ್ಬೆಗಳಿದ್ದರೆ ಅದರ ಮೇಲೆ ಸಾಂಬ್ರಾಣಿ ಎಲೆಗಳನ್ನು ತಿಕ್ಕಿ, ಹುಳು ಕಚ್ಚಿದ ಗಾಯಕ್ಕೂ ಇದು ಅತ್ಯುತ್ತಮ ಮದ್ದು.
ಶೀತದ ಲಕ್ಷಣವಾದ ಮೂಗು ಕಟ್ಟುವ ಸಮಸ್ಯೆಯಿದ್ದರೆ ದೊಡ್ಡ ಪತ್ರೆ/ಸಾಂಬ್ರಾಣಿ ಯ ರಸವನ್ನು ಮೂಗಿನ ಹೊರಭಾಗದಲ್ಲಿ ಎರಡು ಹನಿ ಬಿಡಿ. ಇದರಿಂದ ಗಾಳಿ ಸರಾಗವಾಗಿ ಒಳಹೊರಗೆ ಹೋಗುವಂತಾಗುತ್ತದೆ.
ದೊಡ್ಡ ಪತ್ರೆ ಎಲೆಗಳನ್ನು ಮೊಸರಿನಲ್ಲಿ ಅದ್ದಿ ಮುಖಕ್ಕೆ ತಿಕ್ಕಿಕೊಂಡರೆ ತ್ವಚೆ ಕಾಂತಿಯುತವಾಗುತ್ತದೆ. ಇದರ ಸೂಪ್ ತಯಾರಿಸಿ ಬಾಣಂತಿಯರಿಗೆ ಸವಿಯಲು ಕೊಟ್ಟರೆ ಎದೆಹಾಲು ಹೆಚ್ಚುತ್ತದೆ. ಕಿವಿ ನೋವಿಗೂ ಇದರ ರಸ ರಾಮ ಬಾಣ ಎನ್ನಲಾಗಿದೆ
ಅದರ ಹೊರತಾದ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ….?
ಮೈಯಲ್ಲಿ ಅಲರ್ಜಿಯಿಂದ ಉಂಟಾದ ಬೊಬ್ಬೆಗಳಿದ್ದರೆ ಅದರ ಮೇಲೆ ಸಾಂಬ್ರಾಣಿ ಎಲೆಗಳನ್ನು ತಿಕ್ಕಿ, ಹುಳು ಕಚ್ಚಿದ ಗಾಯಕ್ಕೂ ಇದು ಅತ್ಯುತ್ತಮ ಮದ್ದು.
ಶೀತದ ಲಕ್ಷಣವಾದ ಮೂಗು ಕಟ್ಟುವ ಸಮಸ್ಯೆಯಿದ್ದರೆ ದೊಡ್ಡ ಪತ್ರೆ/ಸಾಂಬ್ರಾಣಿ ಯ ರಸವನ್ನು ಮೂಗಿನ ಹೊರಭಾಗದಲ್ಲಿ ಎರಡು ಹನಿ ಬಿಡಿ. ಇದರಿಂದ ಗಾಳಿ ಸರಾಗವಾಗಿ ಒಳಹೊರಗೆ ಹೋಗುವಂತಾಗುತ್ತದೆ.
ದೊಡ್ಡ ಪತ್ರೆ ಎಲೆಗಳನ್ನು ಮೊಸರಿನಲ್ಲಿ ಅದ್ದಿ ಮುಖಕ್ಕೆ ತಿಕ್ಕಿಕೊಂಡರೆ ತ್ವಚೆ ಕಾಂತಿಯುತವಾಗುತ್ತದೆ. ಇದರ ಸೂಪ್ ತಯಾರಿಸಿ ಬಾಣಂತಿಯರಿಗೆ ಸವಿಯಲು ಕೊಟ್ಟರೆ ಎದೆಹಾಲು ಹೆಚ್ಚುತ್ತದೆ. ಕಿವಿ ನೋವಿಗೂ ಇದರ ರಸ ರಾಮ ಬಾಣ ಎನ್ನಲಾಗಿದೆ.