ದೇವಾಲಯ, ಮಸೀದಿ ಹಾಗೂ ಚರ್ಚುಗಳಲ್ಲಿನ ಮೈಕುಗಳಿಗೆ ಪರವಾನಿಗೆ ಪಡೆದುಕೊಳ್ಳಲು ರಾಜ್ಯ ಸರ್ಕಾರ ಜೂನ್ 14ರ ವರೆಗೆ ಗಡುವು ನೀಡಿದ್ದು, ಅದು ನಿನ್ನೆಗೆ ಅಂತ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಾರ್ಥನಾ ಮಂದಿರಗಳಲ್ಲಿನ ಅನಧಿಕೃತ ಮೈಕುಗಳ ತೆರವಿಗೆ ಪೊಲೀಸರು ಇಂದಿನಿಂದ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ.
ಸರ್ಕಾರ, ಪ್ರಾರ್ಥನಾ ಮಂದಿರಗಳಲ್ಲಿನ ಮೈಕ್ ಗಳಿಗೆ ನಿಗದಿತ ಸಮಯದೊಳಗೆ ಪರವಾನಗಿ ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದರ ಹಿನ್ನೆಲೆಯಲ್ಲಿ ಅನುಮತಿ ಕೋರಿ 900ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಈ ಪೈಕಿ 121 ಅರ್ಜಿ ವಿಲೇವಾರಿ ಮಾಡಿ ಅನುಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಅನುಮತಿ ನೀಡುವ ವೇಳೆ ನ್ಯಾಯಾಲಯದ ಆದೇಶ ಹಾಗೂ ಸರ್ಕಾರದ ಸೂಚನೆಗಳನ್ನು ಪರಿಗಣಿಸಲಾಗಿದ್ದು, ಇದೀಗ ಗಡುವು ಅಂತ್ಯಗೊಂಡಿರುವ ಹಿನ್ನೆಲೆಯಲ್ಲಿ ಪ್ರಾರ್ಥನಾ ಮಂದಿರಗಳಲ್ಲಿನ ಅನಧಿಕೃತ ಮೈಕುಗಳ ತೆರವಿಗೆ ಕಾರ್ಯಾಚರಣೆ ನಡೆಯಲಿದೆ.