ಜಗತ್ತಿನಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ಸ್ವಯಂ ರಕ್ಷಣೆಯ ತರಬೇತಿಯನ್ನು ಪಡೆಯಬೇಕೆಂಬ ಕೂಗು ಕೇಳಿ ಬರುತ್ತಿದೆ. ಅನೇಕ ಮಹಿಳೆಯರು ಧೂರ್ತರಿಂದ ರಕ್ಷಿಸಿಕೊಳ್ಳಲು ಕರಾಟೆ ಸೇರಿದಂತೆ ಮತ್ತಿತರೆ ಸ್ವಯಂ ರಕ್ಷಣಾ ಕಲೆಗಳನ್ನು ಕಲಿತಿದ್ದಾರೆ.
ದೌರ್ಜನ್ಯ ಎಸಗಲು ಬರುವ ಧೂರ್ತರು ಎಷ್ಟೇ ಬಲಾಢ್ಯರಾಗಿದ್ದರೂ ಅವರನ್ನು ಹಿಮ್ಮೆಟ್ಟಿಸುವುದನ್ನು ಕರಗತ ಮಾಡಿಕೊಂಡಿರುತ್ತಾರೆ. ಹೀಗೆ ಮಹಿಳೆಯೊಬ್ಬಳು ಏಕಾಂಗಿಯಾಗಿ ಒಬ್ಬರಲ್ಲಾ, ಇಬ್ಬರಲ್ಲಾ ತನಗೆ ಕಿರುಕುಳ ನೀಡಲು ಯತ್ನಿಸಿದ ಆರು ಮಂದಿ ಧೂರ್ತರನ್ನು ಹೊಡೆದು ಹಿಮ್ಮೆಟ್ಟಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆ ಮಹಿಳೆಯ ಸಾಹಸಕ್ಕೆ ವಾಹ್ ವಾಹ್ ಎಂದು ತಲೆದೂಗಿದ್ದಾರೆ.
ರಸ್ತೆಯೊಂದರಲ್ಲಿ ಈ ಘಟನೆ ನಡೆದಿದೆ. ಆದರೆ, ಈ ಘಟನೆ ನಡೆದದ್ದು ಎಲ್ಲಿ ಎಂದು ತಿಳಿದುಬಂದಿಲ್ಲ. 25 ಸೆಕೆಂಡುಗಳ ಈ ವಿಡಿಯೋದಲ್ಲಿ ಮಹಿಳೆಯನ್ನು ಸುತ್ತುವರಿದ ಆರು ಜನರು ಆಕೆಗೆ ಕಿರುಕುಳ ನೀಡಲಾರಂಭಿಸುತ್ತಾರೆ. ಮೊದಲೇ ಆಕೆ ಮಾರ್ಷಲ್ ಆರ್ಟ್ಸ್ ಅನ್ನು ಕಲಿತ್ತಿದ್ದಳು ಎಂದು ಕಾಣುತ್ತದೆ. ತನ್ನ ಈ ಕಲೆಯನ್ನು ಬಳಸಿದ ಆಕೆ ಒಬ್ಬರ ನಂತರ ಒಬ್ಬರಿಗೆ ಫ್ಲೈಯಿಂಗ್ ಕಿಕ್ ಹೊಡೆಯುತ್ತಾಳೆ. ಅವರನ್ನು ಎಡೆಮುರಿ ಕಟ್ಟಿ ಕೆಳಗೆ ಬೀಳಿಸುತ್ತಾಳೆ.
ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, 3.5 ಮಿಲಿಯನ್ ವೀಕ್ಷಣೆಯಾಗಿದೆ ಮತ್ತು 9000 ಮಂದಿ ಶೇರ್ ಮಾಡಿದ್ದಾರೆ.
https://twitter.com/TheFigen/status/1535610309309874176?ref_src=twsrc%5Etfw%7Ctwcamp%5Etweetembed%7Ctwterm%5E1535610309309874176%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-girl-single-handedly-fights-6-men-harassing-martial-arts-internet-calls-her-badass-5452166%2F