‘ಚಾಮುಂಡಿ ಎಕ್ಸ್ ಪ್ರೆಸ್’ ಹೆಸರಿನ ಹೋರಿಯೊಂದನ್ನು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಸಮನವಳ್ಳಿ ಗ್ರಾಮದ ಸಮಾಜ ಸೇವಕ ಪ್ರಸನ್ನಕುಮಾರ್ ಬರೋಬ್ಬರಿ 18 ಲಕ್ಷ ರೂಪಾಯಿಗಳಿಗೆ ಖರೀದಿ ಮಾಡಿದ್ದಾರೆ. ಹೋರಿ ಹಬ್ಬದ ಅಭಿಮಾನಿಯಾಗಿರುವ ಇವರು ಜನಪದ ಕ್ರೀಡೆ ಹೋರಿ ಹಬ್ಬ ಉಳಿಯಬೇಕೆಂಬ ಕಾರಣಕ್ಕೆ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ಬಂಧನದ ಭೀತಿಯಲ್ಲಿ ರಾಹುಲ್ ಗಾಂಧಿ…! ಹೆಚ್ಚುತ್ತಲೇ ಇದೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಪ್ರಸನ್ನಕುಮಾರ್ ಅವರ ಬಳಿ ಈಗಾಗಲೇ ಏಕದಂತ, ರೇಣುಕಾಂಬ ಎಕ್ಸ್ ಪ್ರೆಸ್, ಸಮನವಳ್ಳಿ ಅಧ್ಯಕ್ಷ, ಸಮನವಳ್ಳಿ ಸಾಹುಕಾರ ಎಂಬ ಹೆಸರಿನ ಹೋರಿಗಳಿದ್ದು, ಈಗ ಚಾಮುಂಡಿ ಎಕ್ಸ್ ಪ್ರೆಸ್ ಮತ್ತೊಂದು ಸೇರ್ಪಡೆಯಾಗಿದೆ. ಈ ಹೋರಿ ಇನ್ನು ಮುಂದೆ ‘ಸಮನವಳ್ಳಿ ಚಾಮುಂಡಿ ಎಕ್ಸ್ ಪ್ರೆಸ್’ ಎಂಬ ಹೆಸರಿನಲ್ಲಿ ಅಖಾಡಕ್ಕೆ ಇಳಿಯಲಿದೆ.
ಚಾಮುಂಡಿ ಎಕ್ಸ್ ಪ್ರೆಸ್ ವಿಶೇಷತೆಯೆಂದರೆ ಬಹುತೇಕ ಎಲ್ಲ ಹೋರಿ ಹಬ್ಬಗಳಲ್ಲೂ ಇದು ಬಂಪರ್ ಬಹುಮಾನ ಪಡೆದಿದೆ. ಯಾರೊಬ್ಬರ ಕೈಗೂ ಸಿಗದೆ ಅಖಾಡದಲ್ಲಿ ಅಬ್ಬರಿಸುವ ಚಾಮುಂಡಿ ಎಕ್ಸ್ ಪ್ರೆಸ್ ಮನೆಯಲ್ಲಿ ಮಾತ್ರ ಸೌಮ್ಯ ಸ್ವಭಾವದಿಂದ ಇರುತ್ತದೆ ಎಂದು ಹೇಳಲಾಗಿದೆ.