ಸುರಕ್ಷಿತ ಭವಿಷ್ಯದ ದಿನ ಕಳೆಯಲು ಬಯಸುವ ಮತ್ತು ಹಣ ಉಳಿಸಲು ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸದವರಿಗೆ ಎಲ್ ಐ ಸಿ ಅನೇಕ ಪಾಲಿಸಿ ಯೋಜನೆ ನೀಡುತ್ತಿದೆ.
ಎಲ್ಐಸಿ ಆಧಾರ್ ಶಿಲಾ ಪಾಲಿಸಿಯು ವಿಶೇಷವಾಗಿ ಮಹಿಳೆಯರಿಗಾಗಿ ಮಾಡಲಾದ ಪಾಲಿಸಿ ಪ್ಲಾನ್ ಆಗಿದೆ. ಇದು ಲಿಂಕ್ ಮಾಡದ, ವೈಯಕ್ತಿಕ, ಜೀವ ವಿಮೆ ಯೋಜನೆಯಾಗಿದೆ.
ಮಹಿಳೆಯರು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ. ಯೋಜನೆಯು ರಕ್ಷಣೆ ಮತ್ತು ಉಳಿತಾಯಗಳ ಸಂಯೋಜನೆಯನ್ನು ನೀಡುತ್ತದೆ. ಮೆಚ್ಯೂರಿಟಿಯ ಮೊದಲು ಯಾವುದೇ ಸಮಯದಲ್ಲಿ ಪಾಲಿಸಿದಾರರ ಮರಣದ ಸಂದರ್ಭದಲ್ಲಿ ಕುಟುಂಬಕ್ಕೆ ಹಣಕಾಸಿನ ನೆರವು ಮತ್ತು ಮುಕ್ತಾಯದ ವರೆಗಿನ ಉಳಿದಿರುವ ಸಮಯದ ಒಟ್ಟು ಮೊತ್ತ ನೀಡಲಿದೆ.
ಈ ಯೋಜನೆಯಲ್ಲಿ ದಿನಕ್ಕೆ 30 ರೂ. ನಂತೆ ಒಂದು ವರ್ಷದಲ್ಲಿ ನೀವು ಸುಮಾರು 10,950 ರೂ. ಉಳಿತಾಯ ಮಾಡಿರುತ್ತೀರಿ, 20 ವರ್ಷಗಳವರೆಗೆ ಮುಂದುವರಿಸಿ ಮತ್ತು 30 ನೇ ವಯಸ್ಸಿನಲ್ಲಿ ಯೋಜನೆಯನ್ನು ಪ್ರಾರಂಭಿಸಿದ್ದರೆ 20 ವರ್ಷಗಳಲ್ಲಿ ರೂ. 2,19,000 ಮೊತ್ತವನ್ನು ಹೂಡಿಕೆ ಮಾಡುತ್ತೀರಿ,
ಇದಕ್ಕಾಗಿ ವಾಪಸಾತಿಯು ಮುಕ್ತಾಯದ ಸಮಯದಲ್ಲಿ ಸುಮಾರು 3,97,000 ರೂ. ಸಿಗಲಿದೆ.
ಈ ಪಾಲಿಸಿಯ ಅಡಿಯಲ್ಲಿ ಕನಿಷ್ಠ ಮೂಲ ವಿಮಾ ಮೊತ್ತವು ರೂ 75,000 ಆಗಿದ್ದು, ಗರಿಷ್ಠ ಮೂಲ ವಿಮಾ ಮೊತ್ತ ರೂ. 3 ಲಕ್ಷ ದಾಟುವಂತಿಲ್ಲ. ಇದರರ್ಥ ಒಬ್ಬರು ಗರಿಷ್ಠ 3 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಪಾಲಿಸಿಯ ಮೆಚ್ಯೂರಿಟಿ ಅವಧಿಯು 10 ವರ್ಷಗಳಿಂದ 20 ವರ್ಷಗಳವರೆಗೆ ಇರುತ್ತದೆ. ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದು.