ಒಬ್ಬರ ಶಾಶ್ವತ ಅಗಲಿಕೆ ಎಷ್ಟು ನೋವನ್ನುಂಟು ಮಾಡುತ್ತೆ ಅನ್ನೊದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಈ ಘಟನೆ ನಡೆದಿದ್ದು ಮಧ್ಯಪ್ರದೇಶದಲ್ಲಿ. ತನ್ನ ಸೋದರ ಸಂಬಂಧಿ ಸಾವಿನಿಂದ ಮನವೊಂದ ವ್ಯಕ್ತಿಯೋರ್ವ ಉರಿಯುತ್ತಿರುವ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಧ್ಯಪ್ರದೇಶದ ಸಾಗರ ಜಿಲ್ಲೆಯ ಬಹೇರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಚ್ಚಿಬೀಳುವಂತಹ ಪ್ರಕರಣ ಬೆಳಕಿಗೆ ಬಂದಿದೆ. ಜ್ಯೋತಿ ಅಲಿಯಾಸ್ ಪ್ರೀತಿ ಡಾಂಗಿ ಗುರುವಾರದಂದು ನಾಪತ್ತೆಯಾಗಿದ್ದಾರೆ.
ಎಷ್ಟು ಹುಡುಕಿದರೂ ಆಕೆ ಸಿಕ್ಕಿರಲಿಲ್ಲ. ಕೊನೆಗೆ ತೋಟದಲ್ಲಿ ಹೋಗಿ ಹುಡುಕಿದಾಗ ಆಕೆಯ ಶವ ಅಲ್ಲಿರೋ ಬಾವಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಕೊನೆಗೆ ಶವದ ಪಂಚನಾಮೆ ನಡೆಸಿ ಪೋಸ್ಟ್‌ಮಾರ್ಟಂ ಮಾಡಿಸಿದ್ದಾರೆ. ಆ ನಂತರ ಅದೇ ದಿನ ಸಂಜೆ 6 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
BIG BREAKING: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಕುಸಿತ
ಮೃತ ಜ್ಯೋತಿ ದೊಡ್ಡಪ್ಪನ ಮಗ 21 ವರ್ಷದ ಕರಣ್, ಸ್ವಲ್ಪ ಹೊತ್ತಿನ ನಂತರ ಬಂದಿದ್ದಾನೆ. ಸ್ಮಶಾನಕ್ಕೆ ಬಂದ ಆತ ಜ್ಯೋತಿಯ ಚಿತೆಯ ಮುಂದೆ ನಿಂತು ಅದಕ್ಕೆ ನಮಸ್ಕಾರ ಮಾಡಿದ್ದಾನೆ. ಅದನ್ನ ಅಲ್ಲಿದ್ದವರು ಕೂಡಾ ಗಮನಿಸಿದ್ದಾರೆ. ಕೊನೆಗೆ ನೋಡ ನೋಡುತ್ತಲೇ ಹೊತ್ತಿ ಉರಿಯುತ್ತಿರೊ ಚಿತೆಗೆ ಹಾರಿದ್ದಾನೆ. ತಕ್ಷಣವೇ ಗ್ರಾಮಸ್ಥರು ಕುಟುಂಬದವರಿಗೆ ಸುದ್ದಿ ತಲುಪಿಸಿದ್ದಾರೆ. ಅವರು ಬಂದು ನೋಡುವಷ್ಟರಲ್ಲಿ ಕರಣ್ ದೇಹ ಭಾಗಶಃ ಸುಟ್ಟು ಹೋಗಿತ್ತು. ಕೂಡಲೇ ಆಸ್ಪತ್ರೆಗೆ ಸಾಗಿಸಲಾದರೂ ಕರಣ್ ಬದುಕುಳಿಸಲು ಸಾಧ್ಯವಾಗಲಿಲ್ಲ.
ಕರಣ್ ದೇಹವನ್ನ ಕೂಡಾ ಸಹೋದರಿ ಜ್ಯೋತಿ ಚಿತಾಗಾರ ಬಳಿ ಅಂತ್ಯಕ್ರಿಯೆ ಮಾಡಲಾಯಿತು. ಈಗ ಪೊಲೀಸರು ಈ ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಎಂದು ಬಹೇರಿಯಾ ಪೊಲೀಸ್ ಠಾಣೆ ಇನ್‌ಚಾರ್ಜ್ ದಿವ್ಯಾಪ್ರಕಾಶ ತ್ರಿಪಾಠಿ ಹೇಳಿದ್ದಾರೆ.