ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಕಂಡ ಅದ್ಭುತ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಂಡಿದ್ದಾರೆ. ಜಲಪಾತದಿಂದ ಕೆಳಕ್ಕೆ ಧುಮ್ಮಿಕ್ಕುವ ನೀರು ಗಾಳಿಯ ರಭಸಕ್ಕೆ ಮೇಲ್ಮುಖವಾಗಿ ಚಿಮ್ಮಿದೆ.
ಪ್ರಪಾತಕ್ಕೆ ಧುಮ್ಮಿಕ್ಕುತ್ತಿದ್ದ ನೀರು ಗಾಳಿಯ ರಭಸಕ್ಕೆ ಕಾರಂಜಿಯಂತೆ ಮೇಲೆ ಚಿಮ್ಮುತ್ತಿರುವ ಅಪರೂಪದ ದೃಶ್ಯವನ್ನು ಪ್ರವಾಸಿಗರು ಕಂಡು ವಿಸ್ಮಿತರಾಗಿದ್ದಾರೆ. ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದು ಜಾಲತಾಣದಲ್ಲಿ ಹಾಕಿದ್ದು, ವೈರಲ್ ಆಗಿದೆ.
ಜೋಗ ಜಲಧಾರೆಗಳಾದ ರಾಜಾ, ರಾಣಿ, ರೋರರ್ ರಾಕೆಟ್ ಜಲಧಾರೆ ಭಾರಿ ಗಾಳಿಯ ರಭಸಕ್ಕೆ ಪ್ರಪಾತಕ್ಕೆ ಧುಮ್ಮಿಕ್ಕುವ ಬದಲು ಮೇಲ್ಮುಖವಾಗಿ ಚಿಮ್ಮುತ್ತಿದ್ದ ಅದ್ಭುತ ದೃಶ್ಯ ಕಂಡುಬಂದಿದ್ದು, ಇದನ್ನು ಕಂಡ ಪ್ರವಾಸಿಗರು ಹರ್ಷೋದ್ಘಾರ ವ್ಯಕ್ತಪಡಿಸಿದ್ದಾರೆ.