ಏನಾದರೂ ತಿಂಡಿ ಬೇಕು ಎಂದು ಮಕ್ಕಳು ಕೇಳುತ್ತಾ ಇರುತ್ತಾರೆ. ಹೊರಗಡೆಯಿಂದ ಏನೇನೋ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಅವರಿಗೆ ರುಚಿಕರವಾದ ಈ ಬಾಳೆಹಣ್ಣಿನ ಸಿಹಿ ಬೊಂಡ ಮಾಡಿಕೊಳ್ಳಿ. ಇದು ರುಚಿಕರವಾಗಿರುತ್ತದೆ ಜತೆಗೆ ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಸಾಮಾಗ್ರಿಗಳು: ಗೋಧಿ ಹಿಟ್ಟು 1 ಕಪ್, ಅರ್ಧ ಕಪ್-ಸಕ್ಕರೆ, ಪಚ್ಚೆ ಬಾಳೆಹಣ್ಣು -2, ಚಿಟಕೆ, ಏಲಕ್ಕಿ ಪುಡಿ, ಚಿಟಿಕೆ-ಉಪ್ಪು, ಚಿಟಕೆ-ಸೋಡ, ¼ ಕಪ್- ತೆಂಗಿನ ತುರಿ, 1 ಕಪ್ –ಹಾಲು,
ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಸಕ್ಕರೆ, ಏಲಕ್ಕಿ ಬಾಳೆಹಣ್ಣು ಸೇರಿಸಿ ರುಬ್ಬಿಕೊಳ್ಳಿ. ನೀರು ಸೇರಿಸಬೇಡಿ. ನಂತರ ಇದನ್ನು ಒಂದು ಬೌಲ್ ಗೆ ಹಾಕಿ ಅದಕ್ಕೆ ಚಿಟಿಕೆ ಉಪ್ಪು, ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಸ್ವಲ್ಪ ಸ್ವಲ್ಪ ಗೋಧಿ ಹಿಟ್ಟು ಹಾಕಿ ಇದಕ್ಕೆ ಸ್ವಲ್ಪ ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
ಇಡ್ಲಿ ಹಿಟ್ಟಿನ ಹದಕ್ಕೆ ಈ ಮಿಶ್ರಣ ಇರಲಿ. ಕಾದ ಎಣ್ಣೆಯಲ್ಲಿ ಸ್ವಲ್ಪ ಸ್ವಲ್ಪ ತೆಗೆದುಕೊಂಡು ಎಣ್ಣೆ ಕಾವಲಿಗೆ ಬಿಡಿ. ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಂಡರೆ ರುಚಿಕರವಾದ ಬಾಳೆಹಣ್ಣಿನ ಸಿಹಿ ಬೊಂಡ ರೆಡಿ.